Posts

ಮುಂಗಾರಿನ ಮೊದಲ ಮಳೆಯ ಬೆನ್ನು ಹಿಡಿದು ಹೋಗಿ......

Image
Image courtesy weather.com ಈ ನಡುವೆ ತುಂಬಾ ವ್ಯಸ್ತನಾಗಿದ್ದೆ. ಬರೆಯಲು ಸಮಯವಿರಲಿಲ್ಲವೆಂದಲ್ಲ, ಸಮಯವಿತ್ತು ಆದರೆ ಕೆಲವೊಮ್ಮೆ ಆತ್ಮಾವಲೋಕನ ಮಾಡಬೇಕಾಗುತ್ತದೆ. ಇಲ್ಲಿ ಮಳೆಗಾಲ ಪ್ರಾರಂಭವಾಗಿದೆ. ನನಗೆ ಚಿಕ್ಕಂದಿನಿಂದಲೇ ಮಳೆಗಾಲವೆಂದರೆ ತುಂಬಾ ಇಷ್ಟ. ಕರಾವಳಿಯಲ್ಲಿ ಮಳೆಗಾಲ ಆರಂಭವಾಯಿತೆಂದರೆ ಮನೆಗಳಲ್ಲಿ ಸಂಭ್ರಮವೋ ಸಂಭ್ರಮ. ನಾವು ಮಕ್ಕಳಿದ್ದಾಗ, ಬೇಸಿಗೆ ರಜೆಯಲ್ಲಿ ಅಜ್ಜಿ- ಅಜ್ಜಂದಿರನ್ನು ಭೇಟಿಯಾಗಲು ಊರಿಗೆ ದೌಡಾಯಿಸುತ್ತಿದ್ದೆವು. ಏಪ್ರಿಲ್ –ಮೇ ತಿಂಗಳಿನಲ್ಲಿ ಮುಂಗಾರು ಪ್ರಾರಂಭವಾಗುವ ಮುಂಚೆ ಒಂದು ಸಾಂಕೇತಿಕ ಮಳೆ ಬರುತಿತ್ತು. ಮುಂಗಾರಿನ ಮೊದಲ ಮಳೆ. ಅದರ ಸೌಂದರ್ಯದ ಪರಿಯನ್ನು  ವಿವರಿಸಬೇಕಾದರೆ  ಕವಿಯಾಗಬೇಕಾಗುತ್ತದೆ. ಬಿಸಿಲಿನ ಬೇಗೆಯಲ್ಲಿ ಬೆಂದ ನೆಲ, ಜಲ, ಪ್ರಕೃತಿಗಳೆಲ್ಲ ಈ ಮಳೆಯಿಂದ ರೋಮಾಂಚನಗೊಂಡು ನಲಿಯುವುದು ಸ್ಪಷ್ಟವಾಗಿ ತೋರುತಿತ್ತು. ಈ ಮಳೆಯಿಂದ ಹಳ್ಳ-ಕೊಳ್ಳಗಳೆಲ್ಲ ತುಂಬಿ ಬಿಗುಮಾನದಿಂದ ಹರಿಯುತ್ತಿದ್ದವು. ಪಕ್ಷಿಗಳ ಚಿಲಿಪಿಲಿ ಕಲರವ ಮುಗಿಲು ಮುಟ್ಟುತ್ತಿತ್ತು. ನಾಯಿ, ಬೆಕ್ಕು, ಅಳಿಲು, ಕೋಳಿಗಳೆಲ್ಲ ಆಟವಾಡತೊಡಗಿ ತಮ್ಮದೇ ಮೂಕ ಶೈಲಿಯಲ್ಲಿ ಸಂಭ್ರಮವನ್ನು ಸಾರುತ್ತಿದ್ದವು. ಅಷ್ಟರಲ್ಲಿ ಸುಳಿ ಮಿಂಚೊಂದು ಸುಳಿದು, ಗುಡುಗೊಂದು ಅಬ್ಬರಿಸಿ ಆಗಸವು ಹೂಂಕರಿಸಿದಾಗ ಮಕ್ಕಳಾದ ನಾವು ಜೋರಾಗಿ ಕೂಗುತ್ತ ಮನೆಯ ಒಳಗಿನ ಜಗಲಿಯಲ್ಲಿ ಕುಳಿತು ಆಟವಾಡುತ್ತಿದೆವು. ಚೆನ್ನಮಣೆ, ಹಾವು-ಏಣಿ ಆಟ, ಕಣ...

ಸಾವು ಸಂಭವಿಸಿದ ನಂತರ ನೀವು ಕೈಗೊಳ್ಳಬೇಕಾದ ೮ ಅಗತ್ಯ ಕಾರ್ಯಗಳು.

ಡೆತ್ ನೋಟ್:   ನಿಮ್ಮ ಡಾಕ್ಟರ್ನಿಂದ ಡೆತ್ ನೋಟ್ ಪ್ರತಿಯನ್ನು   ತೆಗೆದುಕೊಳ್ಳಲು ಖಂಡಿತ ಮರೆಯಬೇಡಿರಿ. ಅದರಲ್ಲಿ ಸತ್ತ ವ್ಯಕ್ತಿಯ   ಸಾವಿನ ಕಾರಣ , ಸಮಯ ಮತ್ತು ಡಾಕ್ಟರ್ ಹಸ್ತಾಕ್ಷರ ಇರುವುದನ್ನು ಖಾತ್ರಿಪಡಿಸಿಕೊಳ್ಳಿ. ಇದು ಮನೆ , ಆಸ್ಪತ್ರೆ ಎಲ್ಲಾ ಕಡೆಗೂ ಅನ್ವಯವಾಗುತ್ತದೆ.   ೨.   ಪಂಚನಾಮೆ ಪತ್ರ:   ಶವಸಂಸ್ಕಾರದ ನಂತರ ಪಂಚನಾಮೆ ಪತ್ರವನ್ನು ಸ್ಮಶಾನದಿಂದಲೇ   ಪಡೆದು ಕೊಳ್ಳಿ. ಇದಕ್ಕೆ ಹೆಚ್ಚಿನ ಹಣ ಖರ್ಚಾಗುವುದಿಲ್ಲ.   ೩.   ಡೆತ್ ಸರ್ಟಿಫಿಕೇಟ್   :   ಮುನ್ಸಿಪಾಲಿಟಿ ಅಥವಾ   ಕಾರ್ಪೋರೇಶನ್ಗೆ   ಹೋಗಿ ಸಾವಿನ ಪತ್ರ (ಡೆತ್ ಸರ್ಟಿಫಿಕೇಟ್ಗೆ) ಅರ್ಜಿ ಪಡೆಯಿರಿ. ಅರ್ಜಿಯನ್ನು ಭರ್ತಿ ಮಾಡಿ ಆದಷ್ಟು ಜಾಸ್ತಿ ಪ್ರತಿಯನ್ನು ಪಡೆದುಕೊಳ್ಳಿ. (ಈಗ ಐದು ಪ್ರತಿವರೆಗೆ ಸಿಗುತ್ತದೆ.) ನಾನು ಅರ್ಜಿ ಸಾಲಿನಲ್ಲಿ ನಿಂತಾಗಲೇ ಒಬ್ಬರು ಕೇವಲ ಎರಡು ಪ್ರತಿ ಪಡೆದುಕೊಂಡು ಅಗತ್ಯ ಕಾರ್ಯಕ್ಕೆ ಪುನಃ ಪಡೆಯಲು ಹೆಣಗಾಡುತ್ತಿದ್ದರು. ಇದು ೧೦ ರಿಂದ ೧೫ ದಿನಗಳವರೆಗೆ   ಹಿಡಿಯುತ್ತದೆ.   ೪.   ಪಾನ್ ಕಾರ್ಡ್:   ಹೆಚ್ಚಾಗಿ ಮನೆಯಲ್ಲೇ ಇರುವ ತಾಯಂದಿರು , ವೃದ್ದರು ಪಾನ್ ಕಾರ್ಡ್ ಮಾಡುವ ಗೋಜಿಗೆ ಹೋಗುವುದಿಲ್ಲ. ಇದನ್ನು ನೀವು ಸರಕಾರಿ ವೆಬ್ಸೈಟ್ ಅಥವಾ ಏಜೆಂಟರ ಮುಖಾಂತರ ಮಾಡಿಸಬಹುದು. ಸತ್ತ ವ್ಯಕ್ತಿ ಸರಕಾರಿ ನೌಕರಿಯಲ್ಲಿದ್ದರೆ ಅಥ...

Miracle in Kuala lumpur Hotel- ಅನಿರೀಕ್ಷಿತ

Image
Miracle in Kuala lumpur Hotel- ಅನಿರೀಕ್ಷಿತ- ಇತ್ತೀಚಿಗೆ ಕೌಲ ಲಂಪುರಿಗೆ ಕೆಲಸದ ನಿಮಿತ್ತ ಹೋಗಿದ್ದೆ . ಅದು ಸುಂದರವಾದ ನಗರಿ. ಇಲ್ಲಿ ಇನ್ನೂ ಹಸಿರು ಬಾಕಿ ಉಳಿದಿದೆ. ಕೆಲಸ ಮುಗಿಯುವಾಗ ಮಧ್ಯಾನ್ಹದ ಹೊತ್ತಾಗಿತ್ತು. ಸೂರ್ಯ ನೆತ್ತಿ ಮೇಲೆ ಏರಿದ್ದ. ಹೊಟ್ಟೆ ಚುರುಗುಡುತ್ತಿತ್ತುಇಲ್ಲಿ ಹೊಸಬರಾಗಿದ್ದರೆ, ನೀವು ಗ್ರ್ಯಾಬ್, ಉಬರ್ ನಂತಹ app ಬೇಸ್ಡ್ ಟ್ಯಾಕ್ಸಿಯಲ್ಲಿ ಪಯಣಿಸ ಬಹುದು, ಉಳಿದ ಟ್ಯಾಕ್ಸಿಗಳು ಇವೆ ಆದರೆ ನಿಮ್ಮ ಸುರಕ್ಷತೆ ಬಗ್ಗೆ ಯಾವುದೇ ಮಹಾನಗರಗಳಂತೆ ಗಮನವಿರಲಿ. ಎಲ್ಲಾ ರೀತಿಯ ಜನರಿರುತ್ತಾರೆ. ಆದರೆ ನೀವು ಕಾರನ್ನು ರೆಂಟ್ ಪಡೆದು ಚಲಾಯಿಸುವುದಾದರೆ ಕೆಲವು ವಿಷಯಗಳನ್ನು ಗಮನದಲ್ಲಿ ಇಟ್ಟುಕೊಳ್ಳಬೇಕು. ನಮ್ಮ ದೇಶದಲ್ಲಿರುವಂತೆ ಜನರನ್ನು ಕೇಳಿಕೊಂಡು ದಾರಿ ಹುಡುಕಿ ಕೊಂಡುಹೋಗುವ ಪದ್ಧತಿ ಇಲ್ಲಿ ಇಲ್ಲ. ಅದು ಸಾಧ್ಯವೂ ಇಲ್ಲ. ನೀವು ಜಿಪಿಎಸ್, ಗೂಗಲ್ ಮ್ಯಾಪ್ಸ ಅಥವಾ ವೇಜ್ ಬಳಸಲು ಕಲಿಯಬೇಕು. ಇವು ನಿಮ್ಮ ಗೈಡ್ಗಳಾಗಿ ಸಹಾಯ ಮಾಡುತ್ತವೆ. ಅಲ್ಲಲ್ಲಿ ಸ್ಪೀಡ್ ಟ್ರ್ಯಾಕಿಂಗ್ ಕ್ಯಾಮೆರಾಗಳು  ಇರುತ್ತವೆ. ಹಾಗೆ ಪಾರ್ಕ್ ಮಾಡಬೇಕಾದರೆ ಪಾರ್ಕಿಂಗ್ ಕೂಪನ್ ಉಪಯೋಗಿಸಬೇಕು. ಅದು ಹೆಚ್ಚಿನ ಅಂಗಡಿಗಳಲ್ಲಿ ದೊರಕುತ್ತವೆ. ನಿಮ್ಮ ಫೋನ್ ಸರ್ವಿಸ್ ಮತ್ತುನೆಟ್ವರ್ಕ್ ಸದಾ ಕಾಲ ಆನ್ ಆಗಿರಬೇಕು. . ಇಲ್ಲದಿದ್ದರೆ ಕೆಲವು ಪ್ರೈವೇಟ್ ಪಾರ್ಕಿಂಗ್ ವ್ಯವಸ್ಥೆ ಇರುತ್ತದೆ . ಆದರೆ ಇಲ್ಲಿ ಎಲ್ಲದಕ್ಕೂ ದುಡ್ಡು ಕಟ್ಟಬೇ...

Childhood- ಬಾಲ್ಯ ನಮ್ಮೆಲ್ಲರ ಜೀವನದ ಕಾವ್ಯ – ಬಾಲ್ಯದ ನೆನಪನೇರಿ ಒಂದು ಸವಾರಿ (ಭಾಗ -೧)

Image
ನವಜಾತ ಶಿಶುವು ಜನ್ಮಿಸಿದಾಗ ಅಳುತ್ತದೆ. ಆದರೆ ಆ ಅಳು ಹಲವರ ಮೊಗದಲ್ಲಿ ನಗು ಮೂಡಿಸುತ್ತದೆ. ತಾಯಿ, ದಾದಿ, ಪ್ರಸೂತಿ ತಜ್ಞರು, ಅರಿವಳಿಕೆ ತಜ್ಞರ ತಂಡ ಈ ಚಮತ್ಕಾರದ ಪ್ರತ್ಯಕ್ಷದರ್ಶಿಗಳಾಗಿರುತ್ತಾರೆ. ಈಗ ತಂದೆಯನ್ನೂ ಕೂಡ ಕರುಳ ಬಳ್ಳಿಯನ್ನು ಕತ್ತರಿಸಲು ಒಳಗೆ ಬಿಡುತ್ತಾರೆ. ಕೆಲವರು ಈ ವಿಸ್ಮಯಕಾರಿ ದೃಶ್ಯವನ್ನು ವೀಡಿಯೊ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಯಬಿಡುತ್ತಾರೆ. ಇದರ ತಪ್ಪು ಒಪ್ಪುಗಳ ಬಗ್ಗೆ ಚರ್ಚೆಗಳು ನಡೆಯುತ್ತಲೇ ಇರುತ್ತದೆ. ಆದರೆ ನಾವು ನಿತ್ಯ ಓದುವ ಹೆಣ್ಣು ಭ್ರೂಣಗಳ ಹತ್ಯೆ, ಅನೈತಿಕ ಸಂಭಂಧಗಳಲ್ಲಿ ಜನಿಸಿದ ಹಾಲುಗಲ್ಲದ ಶಿಶುಗಳನ್ನು ತ್ಯಜಿಸಿ ಮಾಯವಾಗುವ ಹೆತ್ತ ಕರುಳು, ಶಿಶುಗಳ ಮಾರಾಟ, ಹೀಗೆ ನಾನಾ ರೀತಿಯ ಕೃತ್ಯಗಳು ನಿತ್ಯ ವಿಶ್ವಾದ್ಯಂತ ನಡೆಯುತ್ತಲೇ ಇರುತ್ತದೆ. ಇದು ನಮಗೆಲ್ಲರಿಗೂ ಕಲಿಸುವ ದೊಡ್ಡ ಪಾಠವೆಂದರೆ - ನಮಗೆ ನಮ್ಮ ಬಾಲ್ಯವನ್ನು ಕೊಟ್ಟು, ಅದನ್ನು ಪೂರ್ಣವಾಗಿ ಅನುಭವಿಸಲು ಸಹಕರಿಸಿದ ಎಲ್ಲಾ ಪಾತ್ರಧಾರಿಗಳಿಗೆ ನಾವು ಸದಾ ಋಣಿಯಾಗಿರಬೇಕು. ನಮ್ಮ ನೆರಳಾಗಿ ನಮ್ಮನ್ನು ಕಾಪಾಡುವ ತಂದೆ ತಾಯಂದಿರು, ಹತ್ತಿರದ ಸಂಬಂಧಿಗಳು ನಮ್ಮ ವ್ಯಕ್ತಿತ್ವ ವಿಕಸನದಲ್ಲಿ ಅತ್ಯಂತ ಮಹತ್ವದ ಪಾತ್ರವಹಿಸುತ್ತಾರೆ. ಇದರ ಅರಿವು ನಾವು ನಮ್ಮ ಮಕ್ಕಳನ್ನು ಬೆಳೆಯುವುದನ್ನು ನೋಡಿದಾಗ ಮಾತ್ರ ಅರಿವಾಗುತ್ತದೆ. ನಮಗೆ ನಮ್ಮ ಪ್ರಥಮ ನಗು, ಪ್ರಥಮ ಹೆಜ್ಜೆ, ಪ್ರಥಮ ಓಟ, ಪಾಠ ಯಾವುದೂ ನೆನಪಿರದೆ ಹೋದರೂ ಮನದ ಮೂಲೆಯಲ್ಲಿ ಅದು ಯ...

ಮದುವೆಯಾಗಲಿ ಸರಿ ಹೋಗ್ತಾನೆ ಅಂತಾರಲ್ಲ ಯಾಕೆ?

Image
Photo courtesy:https://unsplash.com/photos/HgZHtkD_sj4 ಅದು ಆಗ ಹರೆಯದ ವಯಸ್ಸು. ನಾವು ಡಿಗ್ರಿ ಮುಗಿಸಿ ದುಡಿಮೆಯ ಹೊಸ್ತಿಲಲ್ಲಿ ನಿಂತಿದ್ದೆವು. ಆಗ ಎಲ್ಲೆಡೆ ಮದುವೆಯ ಮಾತುಕತೆ ನಡೆಯುತ್ತಿತ್ತು. ಮದುವೆ ಜೀವನವನ್ನು ಬದಲಿಸುತ್ತದೆ ಎಂದು ಎಲ್ಲರೂ ಹೇಳ್ತಾ ಇದ್ದರು. ಆದ್ರೆ ಅದು ಹೇಗೆ ಸಾಧ್ಯ ಅನ್ನೋದು ಅರ್ಥಾನೇ ಆಗ್ತಿರಲಿಲ್ಲ. ನನ್ನ ಅಣ್ಣಂದಿರಿಗೆ, ಅಕ್ಕಂದಿರಿಗೆ, ಗೆಳೆಯ, ಗೆಳೆತಿಯರಿಗೆ ಮದುವೆ ಆಯಿತು. ಎಲ್ಲಾರ ಮದುವೆಗೆ ಹೋಗಿ ಬಂದಾಯ್ತು. ಅಲ್ಲಿನ ಸಂಭ್ರಮ, ಔತಣ, ನಗು, ಅಳು, ವಾದ್ಯ, ಸಪ್ತಪದಿ ... ಹೀಗೆ ಎಲ್ಲವನ್ನು ನೋಡಿದ್ದಾಯ್ತು. ಆದ್ರೆ ಯಾಕೆ ಇಷ್ಟೊಂದು ಆಡಂಬರ, ಚಿಕ್ಕ ವಿಷಯಗಳಿಗೆ ಗಲಾಟೆ, ಮರ್ಯಾದೆ ಪ್ರಶ್ನೆ, ಕೋಪ-ತಾಪ, ಆತ್ಮೀಯತೆ ಎಲ್ಲವನ್ನೂ ನಾನು ನನ್ನ ಪಡ್ಡೆ ಹುಡುಗರ  ಸಂಘ ದವರೊಂದಿಗೆ ನೋಡಿದ್ದೆ. ಯಾಕಪ್ಪ ಇಷ್ಟೊಂದು ಕಷ್ಟ ? ಸುಮ್ಮನೆ, ಯಾವುದೇ ಸದ್ದು ಗದ್ದಲು ಇಲ್ಲದೆ ರಿಜಿಸ್ಟರ್ಡ್ ಮದುವೆಯಗಬಹುದಿತ್ತಲ್ಲ ಎಂಬ ಸಂಶಯ ನಮ್ಮ ಪಡ್ಡೆ ಹುಡುಗರ ಪಾಳೆಯಕ್ಕೆ ಬಂದದ್ದು ಸುಳ್ಳಲ್ಲ. ನಮ್ಮ ಹುಡುಗು ಬುದ್ದಿಗೆ ಜೀವನದ ಅಘಾಧತೆಯ ಅರಿವು ಆ ದಿನಗಳಲ್ಲಿ ಇರಲಿಲ್ಲ. ಆದರೆ ಆ ದಿನಗಳೇ ನಮ್ಮ ಬಾಳಿನ ಅತ್ಯಂತ ಸ್ಮರಣೀಯ ದಿನಗಳಾಗಿ ಉಳಿದಿದ್ದಾವೆ. ನಮ್ಮ ಪಡ್ಡೆ ಹುಡುಗರ ಸಂಘದವರು ಯಾವುದೇ ಮದುವೆ, ಪೂಜೆ ಅಥವಾ ಸಾರ್ವಜನಿಕವಾದ ಸಮಾರಂಭಗಳಿರಲಿ ಬೇರೆ ಎರಡು ಸಂಘಗಳಿಂದ ದೂರವಿರುತ್ತಿದ್ದೆವು. ಒಂದು,...