Posts

Showing posts from October, 2018

Childhood- ಬಾಲ್ಯ ನಮ್ಮೆಲ್ಲರ ಜೀವನದ ಕಾವ್ಯ – ಬಾಲ್ಯದ ನೆನಪನೇರಿ ಒಂದು ಸವಾರಿ (ಭಾಗ -೧)

Image
ನವಜಾತ ಶಿಶುವು ಜನ್ಮಿಸಿದಾಗ ಅಳುತ್ತದೆ. ಆದರೆ ಆ ಅಳು ಹಲವರ ಮೊಗದಲ್ಲಿ ನಗು ಮೂಡಿಸುತ್ತದೆ. ತಾಯಿ, ದಾದಿ, ಪ್ರಸೂತಿ ತಜ್ಞರು, ಅರಿವಳಿಕೆ ತಜ್ಞರ ತಂಡ ಈ ಚಮತ್ಕಾರದ ಪ್ರತ್ಯಕ್ಷದರ್ಶಿಗಳಾಗಿರುತ್ತಾರೆ. ಈಗ ತಂದೆಯನ್ನೂ ಕೂಡ ಕರುಳ ಬಳ್ಳಿಯನ್ನು ಕತ್ತರಿಸಲು ಒಳಗೆ ಬಿಡುತ್ತಾರೆ. ಕೆಲವರು ಈ ವಿಸ್ಮಯಕಾರಿ ದೃಶ್ಯವನ್ನು ವೀಡಿಯೊ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಯಬಿಡುತ್ತಾರೆ. ಇದರ ತಪ್ಪು ಒಪ್ಪುಗಳ ಬಗ್ಗೆ ಚರ್ಚೆಗಳು ನಡೆಯುತ್ತಲೇ ಇರುತ್ತದೆ. ಆದರೆ ನಾವು ನಿತ್ಯ ಓದುವ ಹೆಣ್ಣು ಭ್ರೂಣಗಳ ಹತ್ಯೆ, ಅನೈತಿಕ ಸಂಭಂಧಗಳಲ್ಲಿ ಜನಿಸಿದ ಹಾಲುಗಲ್ಲದ ಶಿಶುಗಳನ್ನು ತ್ಯಜಿಸಿ ಮಾಯವಾಗುವ ಹೆತ್ತ ಕರುಳು, ಶಿಶುಗಳ ಮಾರಾಟ, ಹೀಗೆ ನಾನಾ ರೀತಿಯ ಕೃತ್ಯಗಳು ನಿತ್ಯ ವಿಶ್ವಾದ್ಯಂತ ನಡೆಯುತ್ತಲೇ ಇರುತ್ತದೆ. ಇದು ನಮಗೆಲ್ಲರಿಗೂ ಕಲಿಸುವ ದೊಡ್ಡ ಪಾಠವೆಂದರೆ - ನಮಗೆ ನಮ್ಮ ಬಾಲ್ಯವನ್ನು ಕೊಟ್ಟು, ಅದನ್ನು ಪೂರ್ಣವಾಗಿ ಅನುಭವಿಸಲು ಸಹಕರಿಸಿದ ಎಲ್ಲಾ ಪಾತ್ರಧಾರಿಗಳಿಗೆ ನಾವು ಸದಾ ಋಣಿಯಾಗಿರಬೇಕು. ನಮ್ಮ ನೆರಳಾಗಿ ನಮ್ಮನ್ನು ಕಾಪಾಡುವ ತಂದೆ ತಾಯಂದಿರು, ಹತ್ತಿರದ ಸಂಬಂಧಿಗಳು ನಮ್ಮ ವ್ಯಕ್ತಿತ್ವ ವಿಕಸನದಲ್ಲಿ ಅತ್ಯಂತ ಮಹತ್ವದ ಪಾತ್ರವಹಿಸುತ್ತಾರೆ. ಇದರ ಅರಿವು ನಾವು ನಮ್ಮ ಮಕ್ಕಳನ್ನು ಬೆಳೆಯುವುದನ್ನು ನೋಡಿದಾಗ ಮಾತ್ರ ಅರಿವಾಗುತ್ತದೆ. ನಮಗೆ ನಮ್ಮ ಪ್ರಥಮ ನಗು, ಪ್ರಥಮ ಹೆಜ್ಜೆ, ಪ್ರಥಮ ಓಟ, ಪಾಠ ಯಾವುದೂ ನೆನಪಿರದೆ ಹೋದರೂ ಮನದ ಮೂಲೆಯಲ್ಲಿ ಅದು ಯ

ಮದುವೆಯಾಗಲಿ ಸರಿ ಹೋಗ್ತಾನೆ ಅಂತಾರಲ್ಲ ಯಾಕೆ?

Image
Photo courtesy:https://unsplash.com/photos/HgZHtkD_sj4 ಅದು ಆಗ ಹರೆಯದ ವಯಸ್ಸು. ನಾವು ಡಿಗ್ರಿ ಮುಗಿಸಿ ದುಡಿಮೆಯ ಹೊಸ್ತಿಲಲ್ಲಿ ನಿಂತಿದ್ದೆವು. ಆಗ ಎಲ್ಲೆಡೆ ಮದುವೆಯ ಮಾತುಕತೆ ನಡೆಯುತ್ತಿತ್ತು. ಮದುವೆ ಜೀವನವನ್ನು ಬದಲಿಸುತ್ತದೆ ಎಂದು ಎಲ್ಲರೂ ಹೇಳ್ತಾ ಇದ್ದರು. ಆದ್ರೆ ಅದು ಹೇಗೆ ಸಾಧ್ಯ ಅನ್ನೋದು ಅರ್ಥಾನೇ ಆಗ್ತಿರಲಿಲ್ಲ. ನನ್ನ ಅಣ್ಣಂದಿರಿಗೆ, ಅಕ್ಕಂದಿರಿಗೆ, ಗೆಳೆಯ, ಗೆಳೆತಿಯರಿಗೆ ಮದುವೆ ಆಯಿತು. ಎಲ್ಲಾರ ಮದುವೆಗೆ ಹೋಗಿ ಬಂದಾಯ್ತು. ಅಲ್ಲಿನ ಸಂಭ್ರಮ, ಔತಣ, ನಗು, ಅಳು, ವಾದ್ಯ, ಸಪ್ತಪದಿ ... ಹೀಗೆ ಎಲ್ಲವನ್ನು ನೋಡಿದ್ದಾಯ್ತು. ಆದ್ರೆ ಯಾಕೆ ಇಷ್ಟೊಂದು ಆಡಂಬರ, ಚಿಕ್ಕ ವಿಷಯಗಳಿಗೆ ಗಲಾಟೆ, ಮರ್ಯಾದೆ ಪ್ರಶ್ನೆ, ಕೋಪ-ತಾಪ, ಆತ್ಮೀಯತೆ ಎಲ್ಲವನ್ನೂ ನಾನು ನನ್ನ ಪಡ್ಡೆ ಹುಡುಗರ  ಸಂಘ ದವರೊಂದಿಗೆ ನೋಡಿದ್ದೆ. ಯಾಕಪ್ಪ ಇಷ್ಟೊಂದು ಕಷ್ಟ ? ಸುಮ್ಮನೆ, ಯಾವುದೇ ಸದ್ದು ಗದ್ದಲು ಇಲ್ಲದೆ ರಿಜಿಸ್ಟರ್ಡ್ ಮದುವೆಯಗಬಹುದಿತ್ತಲ್ಲ ಎಂಬ ಸಂಶಯ ನಮ್ಮ ಪಡ್ಡೆ ಹುಡುಗರ ಪಾಳೆಯಕ್ಕೆ ಬಂದದ್ದು ಸುಳ್ಳಲ್ಲ. ನಮ್ಮ ಹುಡುಗು ಬುದ್ದಿಗೆ ಜೀವನದ ಅಘಾಧತೆಯ ಅರಿವು ಆ ದಿನಗಳಲ್ಲಿ ಇರಲಿಲ್ಲ. ಆದರೆ ಆ ದಿನಗಳೇ ನಮ್ಮ ಬಾಳಿನ ಅತ್ಯಂತ ಸ್ಮರಣೀಯ ದಿನಗಳಾಗಿ ಉಳಿದಿದ್ದಾವೆ. ನಮ್ಮ ಪಡ್ಡೆ ಹುಡುಗರ ಸಂಘದವರು ಯಾವುದೇ ಮದುವೆ, ಪೂಜೆ ಅಥವಾ ಸಾರ್ವಜನಿಕವಾದ ಸಮಾರಂಭಗಳಿರಲಿ ಬೇರೆ ಎರಡು ಸಂಘಗಳಿಂದ ದೂರವಿರುತ್ತಿದ್ದೆವು. ಒಂದು,ಇವನು