Posts

Showing posts from June, 2019

ಕೆಲಸದ ಸ್ಥಳದಲ್ಲಿನ ರಾಜಕೀಯ- Office politics

Image
Office politics:    ಮುಸ್ಸಂಜೆ ಹೊತ್ತಾಗಿತ್ತು , ದೂರದ ಬಾನಲ್ಲಿ ಸೂರ್ಯ   ದಿನದ ಪಯಣ ಮುಗಿಸಿ  ತೆರೆ   ಎಳೆದು  ಅ ಸ್ತಮಾನ ನಾ ಗುತ್ತಿದ್ದ ; ನಿತ್ಯ ಆಫೀಸಿನ ಕಾಯಕವನ್ನು ಮುಗಿಸಿ ಮರಳಿ ಗೂಡಿಗೆ ಸೇರುವ   ನಮ್ಮಂಥ ಸಾಮಾನ್ಯರಂತೆ ; ತನ್ನ ಅಂಗಡಿಯ ಬಾಗಿಲು ಮುಚ್ಚಿ ಹೊರಡುವ ಟೀ ಅಂಗಡಿಯ ಸೊಂಪಣ್ಣನಂತೆ . ನಾವಿಬ್ಬರು ಗೆಳೆಯರು ಹೋಟೆಲ್ ಒಂದರಲ್ಲಿ ಕುಳಿತು ಬೆಚ್ಚಗಿನ ಚಹಾ ಸೇವಿಸುತ್ತಿದ್ದೆವು . ಇದ್ದಕಿದ್ದಂತೆ ನಮ್ಮ ಮಾತು ರಾಜಕೀಯದ ಬಗ್ಗೆ ಹಾಗೂ ನಮ್ಮ ಜೀವನದ ಆಗುಹೋಗುಗಳ ಮೇಲೆ, ಅದರ ಪರಿಣಾಮಗಳ ಬಗ್ಗೆ ತಿರುಗಿತ್ತು .  ಈ ವಿಷಯದ ಚರ್ಚೆ ಬರಲು ಕಾರಣ ಒಬ್ಬ ಸ್ನಾತಕೋತ್ತರ ಪದವಿ ಓದುತ್ತಿದ್ದ ವೈದ್ಯೆಯ ಆತ್ಮಹತ್ಯೆಯ ವರದಿ . ಅವಳು ಹಿರಿಯ ವೈದ್ಯರ ಜಾತಿ ರಾಜಕೀಯದಿಂದ ಬೇಸೆತ್ತು ತನ್ನ ಜೀವವನ್ನು ಬಲಿ ನೀಡಿದ್ದಳು ಎಂದು ಪತ್ರಿಕೆಗಳು ವರದಿ ಮಾಡಿದ್ದವು . ಅದು ಈಗ ತನಿಖೆಯ ವಿಚಾರವಾಗಿದೆ . ಪಾಪ ! ಅವಳು ಒಬ್ಬ ವೈದ್ಯೆಯಾಗಲು ಅದು ಎಷ್ಟು ಶ್ರಮ ಪಟ್ಟಿದ್ದಳೋ ಏನೋ?   ಅವಳ ಪೋಷಕರ ಬಲಿದಾನ , ಅವಳ ಶಿಕ್ಷಕರ ತ್ಯಾಗ , ಹಾಗೂ ಅವಳ ಹಿತಚಿಂತಕರ ಪ್ರಾರ್ಥನೆ ಅವಳನ್ನು ಆ ಸ್ಥಾನಕ್ಕೆ ಕೊಂಡೊಯ್ದಿತ್ತು .   ಆ ಬುದ್ಧಿವಂತ ಹೆಣ್ಣು   ಮಗಳು ರಾಜಕೀಯದ ಬಲಿ ಪಶುವಾಗಿದ್ದರೆ ಅವಳಿಗೆ ಹಲವಾರು ದಾರಿಗಳಿ