Posts

Showing posts from August, 2018

ಸಾವೊಂದು ಸಾವಿರ ಜೀವನಕ್ಕೆ ದಾರಿ.........

Image
ಸಾವು ಬಂದ ಅನಂತರ ಮೊತ್ತ ಮೊದಲು ಕೆಲಸ ಮಾಡಿದ್ದು ಕೇವಲ ಅಸ್ಪತ್ರೆಯ ಬಿಲ್ಲ್ ಕಟ್ಟಿದ್ದಲ್ಲ. ‘ಡೆತ್ ರಿಪೋರ್ಟ್’ ಅನ್ನು ಆಸ್ಪತ್ರೆಯಿಂದ ಪಡೆಯಲು ಮರೆಯಬೇಡ ಎಂದು ಹಿರಿಯರು  ಹೇಳಿದರು.ಅಂತೆಯೇ ಮಾಡಿದೆ. ಆಮೇಲೆ ನೋಡುವ ಎಂದು ಹೇಳಿದರೆ ದಯವಿಟ್ಟು ಕೇಳಬೇಡಿ. ಆಮೇಲೆ ಅನಗತ್ಯ ಓಡಾಟಕ್ಕೆ ಕಾರಣವಾಗುತ್ತದೆ. ಆಮೇಲೆ ಸ್ಮಶಾನದಿಂದ ಪಂಚನಾಮೆ ಪತ್ರವನ್ನು ಪಡೆದುಕೊಂಡು, ಮಂಗಳೂರು ನಗರ ಪಾಲಿಕೆಗೆ ಹೋಗಿ ಡೆತ್ ಸರ್ಟಿಫಿಕೇಟಿಗೆ ಅರ್ಜಿಯನ್ನು ತೆಗೆದುಕೊಳ್ಳಿ. ತುಂಬಿ, ಎಷ್ಟು ಕಾಪಿ ಸಾಧ್ಯವೋ ಅಷ್ಟಕ್ಕೆ ಅರ್ಜಿ ಹಾಕಿ. ಇದು ಪ್ರತಿ ಒಂದು ಕಾರ್ಯಕ್ಕೆ ಮುಂದೆ ಸಹಕಾರಿ ಆಗುತ್ತದೆ.   ಗೆಳೆಯರೊಬ್ಬರು ಅನುಭವ ದಿಂದ ಹೇಳಿದ ಮಾತಿದು. ಮನೆಯವರು ಯಾರಾದರೂ ಸಾವಿನ ಹಾದಿ ಹಿಡಿದರೆ, ಆಗ ಅವರನ್ನು ನೋಡಿಕೊಳ್ಳುವ “ಜವಾಬ್ದಾರಿ ಹೊತ್ತುಕೊಳ್ಳುವವರಿಗೆ’ ಮೂರು ಹಂತಗಳಲ್ಲಿ ಕಷ್ಟ ಎದುರಾಗುತ್ತದೆ. ನಾನು ಯಾಕೆ ಹಾಗೆ ಹೇಳಿದೆ ಎಂದರೆ ಇದು ಅನೇಕರ ಅನುಭವ. ಕೆಲವರು ಮಾತ್ರ ಸ್ವಯಂ ಸ್ಫೂರ್ತಿಯಿಂದ ಜವಾಬ್ದಾರಿಯನ್ನು ಆರಿಸುತ್ತಾರೆ ಪೂರೈಸುತ್ತಾರೆ. ಉಳಿದವರು ಕೇವಲ ದುಃಖಿಸಿ ಅಗತ್ಯವಾದ ಸಮಯದಲ್ಲಿ ನುಣುಚಿ ಕೊಳ್ಳುತ್ತಾರೆ. ಆ ಸಾವಿನ ಸಾಕ್ಷಾತ್ ದರ್ಶನವಾದಗಲೂ ವಿಧ ವಿಧದ ಲೆಕ್ಕಾಚಾರ ಹಾಕುತ್ತ ಕುಳಿತು ಆಶ್ಚರ್ಯ ಮೂಡಿಸುತ್ತಾರೆ. ಈಗ ನೀವು ಜವಾಬ್ದಾರಿ ಹೊತ್ತುಕೊಂಡೀರೆಂದರೆ ನಿಮಗೆ ಪ್ರಥಮ ಹಂತದ ನರಕ ಆಸ್ಪತ್ರೆಯಲ್ಲಿ ದರ್ಶನವಾಗುತ್ತದೆ. ನೀವು ನಿಮ್ಮ ಮನೆಯವರ

ಜೀವನ ಇಂದು ಮಗ್ಗುಲು ಬದಲಿಸಿತ್ತು

Image
ಜೀವನ ದಲ್ಲಿ ಗುರು ಎಂಬ ಶಬ್ದ ನಮ್ಮ ಜೀವನದಲ್ಲಿ ಅತ್ಯಂತ ಪ್ರಮುಖವಾದದ್ದು. ತಂದೆ,ತಾಯಿ ಜೀವನದ ಮೊದಲ ಗುರುಗಳು. ನಮಗೆ ಜೀವನದಲ್ಲಿ ದಾರಿ ದೀಪವಗುವುದು ಗುರುಗಳ ಮಾರ್ಗದರ್ಶನ. ಅಪ್ಪ ಕಾಲದಲ್ಲಿ ಲೀನವಾಗಿ ಹೋದರು. ನಾನು ಜೀವನದ ದೊಡ್ಡ ಗುರುಗಳನ್ನು ಕಳೆದುಕೊಂಡು ಬಿಟ್ಟಿದ್ದೆ.  ಅವರು ಕೊನೆಗೆ ಪಡುತ್ತಿದ್ದ ಕಷ್ಟ ಮಕ್ಕಳಾದ ನಮಗೆ ಸಹಿಸಲು ಅಸಾಧ್ಯವಗಿತ್ತು. ಇನ್ನು ಅವರೆಷ್ಟು ಮೌನವಾಗಿ ನರಳಾಡಿದರೋ ನನಗೆ ಗೊತ್ತಿಲ್ಲ. ಅಂದು ನಾನಿದ್ದ ಅಸ್ಪತ್ರೆಯ ವಾರ್ಡಿನಲ್ಲಿ ಎರಡು ಸಾವನ್ನು ಕಂಡೆ. ಇಬ್ಬರೂ ಎಪ್ಪತ್ತರ ಹರೆಯದವರು. ಸಾವಿಗಿಂತ ಮುಂಚೆ ಸಾಕಷ್ಟು ಹೋರಾಡಿದರು, ನರಳಿದರು ಆದರೆ ಸೋತರು. ಆದರೆ ಕಾಲವಾದ ನಂತರ, ದೇಹದ ಕಾವು ಅರುತ್ತಿರುವಾಗ ಒಂದು ಪ್ರಶಾಂತವಾದ ಪ್ರಭಾವಳಿಯನ್ನು ಕಂಡೆ. ಅದು ನನ್ನ ಭ್ರಮೆ ಇರಬೇಕೆಂದು ಅಂದು ಕೊಂಡೆ. ಆದರೆ ಇಬ್ಬರಲ್ಲೂ ಒಂದೇ ರೀತಿಯ ಭಾವನೆಗಳನ್ನು ಭ್ರಮಾಧೀನನಾಗಿ ಕಾಣಲು ಸಾಧ್ಯವೇ? ಅದೂ ಎಂಟು ಗಂಟೆಗಳ ನಡುವೆ? ಬದುಕುವ ಹೋರಾಟದಲ್ಲಿ   ಸೋತ ಅನಂತರ ಕೆಲವು ಗಳಿಗೆ ಒಳಗಾಗಿ ದೇಹದಲ್ಲಿ ನಿಧಾನವಾಗಿ ಸಾವಿನ ಅನಂತರದ ಜೈವಿಕ ಪ್ರಕ್ರಿಯೆಗಳು ಸಾಗುತ್ತವೆ. ಎಲ್ಲವೂ ಪ್ರಕೃತಿಯ ಅದ್ಭುತವೆಂದೇ ಹೇಳಬೇಕು. ಹೆಣ್ಣು ಗರ್ಭ ಧರಿಸುವಾಗ ಪ್ರಕೃತಿಯು ಸಂಭ್ರಮದಿಂದ ಅವಳನ್ನು ಒಂದು ಜೀವಾತ್ಮಕ್ಕೆ ಆಶ್ರಯ ನೀಡಲು ತಯಾರಿಸುತ್ತದೆ, ಅಂತೆಯೇ ಮರಣದ ಅನಂತರ ಪಾರ್ಥಿವ ಶರೀರವನ್ನು ಜೀರ್ಣಿಸುವ ಪ್ರಕ್ರಿಯೆ ಆರಂಭಗೊಳ್ಳುತ್ತದೆ. ಇದನ್

ಕಾಲವಾಗುವಾಗ ಕೋಲ ಕಟ್ಟುವವರು.

ನಮ್ಮ ಮನೆಗೆ ಸದ್ದಿಲ್ಲದೇ ಸಾವು ಹೆಜ್ಜೆ ಇಟ್ಟಿತು. ಅವರ ಪ್ರಾಣ ಹೋಗುವಾಗ ನಾನು ಅಪ್ಪನ ಬಳಿಯಲ್ಲಿಯೇ ಮಲಗಿದ್ದೆ. ಉಸಿರು ನಿಂತಾಗ ಬಳಿಯಲ್ಲೇ ಇದ್ದೆ. ಅವರ ECG ಅಡ್ಡವಾದ ಗೆರೆಯಾದಾಗ ಅಸಹಾಯಕನಾಗಿ ನಿಂತು ನೋಡಿದ್ದೆ. ಅವರು ಆಸ್ಪತ್ರೆಗೆ ಸೇರಿ ಮೂರು ವಾರಗಳು ಕಳೆದು ಹೋಗಿತ್ತು. ಅದಾಗ ಮನಸ್ಸಿಗೆ ಮೂಡಿ ಬಂದ ಪ್ರಥಮ ಭಾವನೆ ಇನ್ಸೂರೆನ್ಸ್ ಇದ್ದರೆ ಎಷ್ಟು ಸುಲಭವಾಗುತ್ತಿತ್ತು ಎಂಬುದು. ಯಾಕೆಂದರೆ ಅಸ್ಪತ್ರೆಯ ಫ್ಲೋರ್ ಕೂರ್ಡಿನೆಟರ್ ನನ್ನ ಕೈಯಲ್ಲಿ ದೊಡ್ಡ ಮೊತ್ತದ ಬಿಲ್ಲನ್ನು ಕೊಟ್ಟು ಕಟ್ಟೆಂದು ಅಪ್ಪಣೆ ಇತ್ತು ಹೋಗಿದ್ದಳು. ಅಪ್ಪ ಎಂದಿಗೂ ಇನ್ಸೂರೆನ್ಸ್ ಬಗ್ಗೆ ಯೋಚನೆ ಮಾಡಲಿಲ್ಲ. ನಾನು ಮಾಡಿ ಕೊಟ್ಟ ಇನ್ಸೂರೆನ್ಸ್ ಅನ್ನು ರಿನೀವ್ ಮಾಡಿಸಿರಲಿಲ್ಲ. ಅವರ ಕಾಲಕ್ಕೆ ಅಂತ ಒಂದು ಪರಿಕಲ್ಪನೆ ಇರಲಿಲ್ಲ. ಆಗಿನ್ನೂ ಹುಟ್ಟು, ಜೀವನ ಹಾಗೂ ಸಾವು ವ್ಯಾಪಾರವಾಗಿರಲಿಲ್ಲ. ಚಾರ್ವಾಕ ಸಿದ್ದಾಂತವು ಇನ್ನೂ ಮರುಹುಟ್ಟು ಪಡೆದಿರಲಿಲ್ಲ. ಆದರೆ ಈಗ ಎಲ್ಲವೂ ವ್ಯಾಪಾರವಾಗಿ ಬಿಟ್ಟಿದೆ. ಅಸ್ಪತ್ರೆಯ ಖರ್ಚು ವೆಚ್ಚ ನಾವೇ ಬರಿಸ ಬೇಕಾಗಿ ಬಂತು. ನಾನು ದೇಶ ಬಿಟ್ಟು ಮಲೇಷ್ಯಾಗೆ ಹೊಟ್ಟೆ ಪಾಡಿಗೆ ಹೋಗಿ ಕೆಲವೇ ವರ್ಷಗಳಾಗಿತ್ತು. ಹಾಗಾಗಿ ಹಣದ ಗಂಟೇನನ್ನು ರಾಶಿ ಹಾಕಿರಲಿಲ್ಲ. ತಾಯಿ ಸರಸ್ವತಿಯ ಕೃಪೆ ನನ್ನ ಮೇಲೆ ಅಪಾರವಾಗಿತ್ತು ಆದರೆ ಯಾಕೋ ತಾಯಿ ಲಕ್ಷ್ಮಿಯು ನನ್ನ ಮೇಲೆ ಸದಾ ಮುನಿಸಿ ಕೊಂಡಿರುತ್ತಾಳೆ. ಅವಳನ್ನು ಓಲೈಸುವ ಕಲೆ ಕರಗತವಾಗಿಲ್ಲ. ಫೈನಾನ್ಸಿಯಲ

ಸಾವಿನರಮನೆಯಲ್ಲಿ

ಸಾವೆಂಬುದು ಯಾರನ್ನೂ ಬಿಟ್ಟಿಲ್ಲ. ಹುಟ್ಟು ಎಂಬುದು ಹುಟ್ಟಿದಾಗಿಂದ, ಅದರೊಡನೆ ಸಾವು ಎಂಬುದು ಜನ್ಮ ತಾಳಿತ್ತು. ನಮಗೆ ಅದರ ಅರಿವಿದ್ದರೂ, ಅದು ಪರರಿಗೆ, ನಮಗೆ ತಟ್ಟಲಾರದು ಎಂಬ ಒಂದು ಹುಚ್ಚು ಧೈರ್ಯ ಆವರಿಸಿರುತ್ತದೆ.   ನನಗೂ ಕೂಡ ಹಾಗೆಯೇ ಹುಂಬು ಧೈರ್ಯವೊಂದು ಆವರಿಸಿ ಬಿಟ್ಟಿತ್ತು. ಈ ಆಸ್ಪತ್ರೆ ಎಂಬುದು ರೋಗದಿಂದ ಮುಕ್ತಿ ಪಡೆಯಲು ನಾವೇ ಕಟ್ಟಿಕೊಂಡ ಒಂದು ದೇಗುಲ. ಆದರೆ ಅದರೊಳಗಿನ ದೇವರು ಇನ್ನೂ ಜೀವಂತವಿದ್ದಾನೆಯೇ ಎಂಬುದು ಅವರವರ ಭಾವಕ್ಕೆ ಬಿಟ್ಟ ವಿಚಾರ. ಅಂದು ಕೆಟ್ಟ ಗಳಿಗೆಯೊಂದು ಬಂದು ನಮ್ಮ ಮನೆಯ ಕದ ತಟ್ಟಿತ್ತು. ಅಪ್ಪ ಹಲವು ಬಾರಿ ಅಸ್ಪತ್ರೆಯ ಮುಖ ದರ್ಶನ ಮಾಡಿ ಬಂದಿದ್ದರು. ಈ ಡಯಾಬಿಟಿಸ್ ಹಾಗೂ ಹೈಪರ್ಟೆನ್ಶನ್ ಎಂಬ ಎರಡು ಮಾರಿಗಳು ಸದ್ದಿಲ್ಲದೆ ನಮ್ಮ ದೇಹವನ್ನು ಪ್ರವೇಶಿಸುತ್ತವೆ. ಒಮ್ಮೆ ಒಳ ಹೊಕ್ಕಿತೆಂದರೆ ಮತ್ತೆ   ನಮ್ಮ ದೇಹವು ಸುಟ್ಟು ಬೂದಿಯಾದ ಮೇಲೆಯೇ ಅವಕ್ಕೆ ತೃಪ್ತಿ. ಇವು ಅಧುನಿಕ ಕಾಲದ ಚಂಡ-ಮುಂಡರು. ಈ ಹೆಮ್ಮಾರಿಗಳು ನಮ್ಮ ತಂದೆಯವರು ಕೇವಲ ೨೭ನೇ ವಯಸ್ಸಿನವರಾಗಿದ್ದಾಗಲೇ ಅವರನ್ನು ಪೀಡಿಸ ತೊಡಗಿದವು. ಆದರೆ ನಾವೆಲ್ಲರೂ ಎದೆಗುಂದದೆ ಅದರ ವಿರುದ್ದ, ಅದರೊಂದಿಗೆ, ಅದರ ಮೇಲೆ, ಅದರ ಕೆಳಗೆ, ಜೊತೆಗೆ, ಹೀಗೆ ಬದುಕುತ್ತಾ ಬಂದಿದ್ದೆವು. ಈ ಯುದ್ದವು ಸುದೀರ್ಘವಾದ, ದಶಕಗಳಷ್ಟು ಉದ್ದ ಸಾಗಿದ ಯುದ್ಧವಾಗಿತ್ತು. ಕೆಲೆವೊಮ್ಮೆ ನಾವು ಗೆದ್ದೆವೆಂದು ಅನಿಸಿತ್ತು. ಆದರೆ ಇದು ಹುಸಿ ಭಾವನೆ ಎಂದು ತಿಳಿಯಲು ಬಹುಕಾಲ