Friendship: ಗೆಳೆಯರಿರಬೇಕು ಯಾಕೆ ಗೊತ್ತಾ ???
ಸರಕಾರಿ ನೌಕರರ ಬದುಕು ಅಲೆಮಾರಿ ಬದುಕು. ಎಷ್ಟು ವರ್ಷಕ್ಕೆ ನಿಮಗೆ ವರ್ಗಾವಣೆ ಆಗುತ್ತದ್ದೋ ಅದು ನಿಮ್ಮ ಇಲಾಖೆಯ ಮೇಲೆ ಹೊಂದಿಕೊಂಡು ಇರುತ್ತದೆ. ನಮ್ಮ ತಂದೆಗೆ ಪ್ರತಿ ಮೂರು ವರುಷಕ್ಕೊಮ್ಮೆ ವರ್ಗಾವಣೆ ಆಗುತ್ತಿತ್ತು. ನಾವು ಒಂದು ಊರಿಗೆ ಬಂದು ಅಲ್ಲಿನ ಸಂ ಸ್ಕೃತಿ , ಭಾಷೆ , ಉಡುಗೆ ತೊಡುಗೆ , ಆಚಾರ-ವಿಚಾರದ ವೈವಿಧ್ಯತೆಯನ್ನು ತಿಳಿದುಕೊಳ್ಳುವುದರೊಳೊಗೆ ಅಪ್ಪನಿಗೆ ಬೇರೆಡೆ ವರ್ಗಾವಣೆ ಆಗುತ್ತಿತ್ತು. ಮತ್ತೆ ಪುನಃ ಹೊಂದಾಣಿಕೆಯ ಕಾರ್ಯ ಶುರುವಾಗುತ್ತಿತ್ತು. ಇದು ನೋವು ಹಾಗೂ ದಣಿವನ್ನು ಮೂಡಿಸುತಿತ್ತು. ಆಗ ನಮಗೂ ಎಲ್ಲರ ಹಾಗೆ ಒಂದೇ ಕಡೆ ಇರುವ ಭಾಗ್ಯವಿಲ್ಲವೇ ಭಗವಂತ ಎಂದು ಬೇಡಿಕೊಂಡದ್ದು ಉಂಟು. ಆಗ ಕಷ್ಟವೆನಿಸಿದರೂ ಇಂದು ಬಾಳಿನ ಪಯಣವನ್ನು ಮೆಲುಕು ಹಾಕುವಾಗ ನಾನು ಕಳೆದುಕೊಂಡದ್ದಕ್ಕಿಂತಲೂ ಪಡೆದುಕೊಂಡದ್ದೇ ಹೆಚ್ಚು. ಯಾವುದೇ ಊರಾಗಲಿ , ರಾಜ್ಯ , ದೇಶವಾಗಲಿ ಒಂದು ಎರಡು ದಿನ ಚಂದ ಕಂಡರೂ , ಅಲ್ಲಿ ಬಾಳಬೇಕಾದರೆ ನಿಮ್ಮ ಗೆಳೆಯರ ಬಳಗ ನಿಮ್ಮ ಕುಟುಂಬದಷ್ಟೇ ಮುಖ್ಯ. ಆ ಜಾಗದ ಮಧುರ ನೆನಪುಗಳು ಇವರಿಂದ ಮಾತ್ರ ಸೃಷ್ಟಿಸಲ್ಪದುತ್ತದೆ. ಗೆಳೆತನ ಎಂಬ ನಾಲ್ಕಕ್ಷರದ ಪದ ನಮ್ಮ ಜೀವನದ ಜೀವನಾಡಿ. ಒಳ್ಳೆಯ ಗೆಳೆಯರೋ , ಕೆಟ್ಟ ಗೆಳೆಯರೋ - ಇಬ್ಬರೂ ನಿಮ್ಮ ಜೀವನದ ಮೇಲೆ ಅಗಾಧವಾದ ಪರಿಣಾಮವನ್ನು ಬೀರುತ್ತಾರೆ. ವೇದೋಪನಿಷತ್ತುಗಳು ನಾವೆಲ್ಲರೂ ‘ಬ್ರಹ್ಮನ್’ ಎಂದು ಹೇಳುತ್ತದೆ. ಅದನ್ನೇ ...