ಸಾವು ಗುರುವಾದಾಗ........
ಗುರು ನಮ್ಮ ಜೀವನದ ಒಂದು ಪ್ರಮುಖ ಅಂಗ. ಗುರುವಿನ ಅಗತ್ಯಗಳ ಬಗ್ಗೆ ವರ್ಣಿಸುವುದು ಅಸಾಧ್ಯ ಕಾರ್ಯ. ತಾಯಿ- ತಂದೆಯರೇ ಮಗುವಿನ ಪ್ರಥಮ ಗುರು. ಅವರು ನಮ್ಮ ಜಗತ್ತು, ಸಮಾಜದಲ್ಲಿ ಬದುಕಲು ಪಾಲಿಸಬೇಕಾದ ನಿಯಮ, ಶಿಷ್ಟಾಚಾರ ಹೀಗೆ ಅನೇಕ ವಿಷಯಗಳ ಬಗ್ಗೆ ಜೀವನದಾದ್ಯಂತ ಶಿಕ್ಷಣ ಕೊಡುತ್ತ ನಮ್ಮ ಜೀವನಕ್ಕೆ ಸಾರ್ಥಕ್ಯವನ್ನು ಕೊಡುತ್ತಾರೆ. ನಂತರದ ಸ್ಥಾನ ನಮಗೆ ಸಿಗುವ ಗುರುವಿಗೆ. ಸದ್ಗುರು ಪಡೆಯಲು ನಾವು ಹಿಂದಿನ ಜನ್ಮದ ಪುಣ್ಯವೇ ಕಾರಣವಾಗುತ್ತದೆ. ಸದ್ಗುರುಗಳು ನಮ್ಮನ್ನು ಕೇವಲ ಪಾಠಮಾಡಿ, ಶಿಕ್ಷೆಯನ್ನು ನೀಡಿ, ಪರೀಕ್ಷೆಯನ್ನು ನೀಡಿ, ಪಾಸೋ ನಪಾಸೋ ಎಂದು ಯೋಗ್ಯತೆಯನ್ನು ಅಳಿದು, ಒಳ್ಳೆ ಹಾಗು ಕೆಟ್ಟ ವಿಧ್ಯರ್ಥಿಗಳೆಂದು ಪಟ್ಟ ಕಟ್ಟಿ, ತಮ್ಮ ಕೆಲಸ ಮುಗಿಸಿ ಜಾಗ ಖಾಲಿ ಮಾಡುವವರಲ್ಲ. ಸದ್ಗುರುಗಳು ಶಿಷ್ಯನಲ್ಲಿರುವ ಒಳ್ಳೆ ಹಾಗು ಕೆಟ್ಟ ಗುಣಗಳನ್ನು ಅಳೆದು, ಅವನನ್ನು ಪ್ರೋತ್ಸಾಹಿಸಿ, ಕತ್ತಲೆಯಿಂದ ಬೆಳಕಿನೆಡೆಗೆ, ಕೆಟ್ಟ ಗುಣಗಳಿಂದ ಸದ್ಗುಣಗಳೆಡೆಗೆ, ಹಾಗೂ ಇನ್ನೂ ಕೆಲವರು ಸಾವಿನಿಂದ ಅಮರತ್ವದೆಡೆಗೆ ಸಾಗಿಸುತ್ತಾರೆ. ಹಾಗಾಗಿ ನೂರಾರು ವರುಷಗಳ ಹಿಂದೆ ಗುರುಕುಲ ಪದ್ದತಿಯಲ್ಲಿ ಶಿಷ್ಯನನ್ನು ಗುರುವಿನೊಂದಿಗೆ, ಅವರ ಕುಟೀರದಲ್ಲಿ ವಾಸಮಾಡಿ ಜ್ಞಾನಾರ್ಜನೆ ಮಾಡಲು ಕಳುಹಿಸಿಕೊಡುತ್ತಿದ್ದರು. ಅವನು ರಾಜಕುಮಾರನೇ ಇರಲಿ ಇಲ್ಲ, ಬಡ ಭಿಕ್ಷುಕನೆ ಇರಲಿ, ಗುರುಗಳು ಎಲ್ಲರನ್ನು ಸಮಾನ ದೃಷ್ಟಿಯಿಂದ ನೋಡಿ, ವಿಧ್ಯಾರ್ಥಿಗೆ ಜ್ಞಾನದ ಹಸಿವು ಎಷ್ಟಿದ...