ಸಾವು ಸಂಭವಿಸಿದ ನಂತರ ನೀವು ಕೈಗೊಳ್ಳಬೇಕಾದ ೮ ಅಗತ್ಯ ಕಾರ್ಯಗಳು.

ಡೆತ್ ನೋಟ್: ನಿಮ್ಮ ಡಾಕ್ಟರ್ನಿಂದ ಡೆತ್ ನೋಟ್ ಪ್ರತಿಯನ್ನು ತೆಗೆದುಕೊಳ್ಳಲು ಖಂಡಿತ ಮರೆಯಬೇಡಿರಿ. ಅದರಲ್ಲಿ ಸತ್ತ ವ್ಯಕ್ತಿಯ ಸಾವಿನ ಕಾರಣ, ಸಮಯ ಮತ್ತು ಡಾಕ್ಟರ್ ಹಸ್ತಾಕ್ಷರ ಇರುವುದನ್ನು ಖಾತ್ರಿಪಡಿಸಿಕೊಳ್ಳಿ. ಇದು ಮನೆ, ಆಸ್ಪತ್ರೆ ಎಲ್ಲಾ ಕಡೆಗೂ ಅನ್ವಯವಾಗುತ್ತದೆ. 
೨. ಪಂಚನಾಮೆ ಪತ್ರ: ಶವಸಂಸ್ಕಾರದ ನಂತರ ಪಂಚನಾಮೆ ಪತ್ರವನ್ನು ಸ್ಮಶಾನದಿಂದಲೇ  ಪಡೆದು ಕೊಳ್ಳಿ. ಇದಕ್ಕೆ ಹೆಚ್ಚಿನ ಹಣ ಖರ್ಚಾಗುವುದಿಲ್ಲ. 
೩. ಡೆತ್ ಸರ್ಟಿಫಿಕೇಟ್ : ಮುನ್ಸಿಪಾಲಿಟಿ ಅಥವಾ  ಕಾರ್ಪೋರೇಶನ್ಗೆ  ಹೋಗಿ ಸಾವಿನ ಪತ್ರ (ಡೆತ್ ಸರ್ಟಿಫಿಕೇಟ್ಗೆ) ಅರ್ಜಿ ಪಡೆಯಿರಿ. ಅರ್ಜಿಯನ್ನು ಭರ್ತಿ ಮಾಡಿ ಆದಷ್ಟು ಜಾಸ್ತಿ ಪ್ರತಿಯನ್ನು ಪಡೆದುಕೊಳ್ಳಿ. (ಈಗ ಐದು ಪ್ರತಿವರೆಗೆ ಸಿಗುತ್ತದೆ.) ನಾನು ಅರ್ಜಿ ಸಾಲಿನಲ್ಲಿ ನಿಂತಾಗಲೇ ಒಬ್ಬರು ಕೇವಲ ಎರಡು ಪ್ರತಿ ಪಡೆದುಕೊಂಡು ಅಗತ್ಯ ಕಾರ್ಯಕ್ಕೆ ಪುನಃ ಪಡೆಯಲು ಹೆಣಗಾಡುತ್ತಿದ್ದರು. ಇದು ೧೦ ರಿಂದ ೧೫ ದಿನಗಳವರೆಗೆ  ಹಿಡಿಯುತ್ತದೆ. 
೪. ಪಾನ್ ಕಾರ್ಡ್: ಹೆಚ್ಚಾಗಿ ಮನೆಯಲ್ಲೇ ಇರುವ ತಾಯಂದಿರು, ವೃದ್ದರು ಪಾನ್ ಕಾರ್ಡ್ ಮಾಡುವ ಗೋಜಿಗೆ ಹೋಗುವುದಿಲ್ಲ. ಇದನ್ನು ನೀವು ಸರಕಾರಿ ವೆಬ್ಸೈಟ್ ಅಥವಾ ಏಜೆಂಟರ ಮುಖಾಂತರ ಮಾಡಿಸಬಹುದು. ಸತ್ತ ವ್ಯಕ್ತಿ ಸರಕಾರಿ ನೌಕರಿಯಲ್ಲಿದ್ದರೆ ಅಥವಾ ನಿವೃತ್ತಿ ಹೊಂದಿದ್ದರೆ ಅವರ ಅವಲಂಬಿತರಿಗೆ ಪೆನ್ಷನ್ ವರ್ಗಾಯಿಸಲು ಇದು ಬೇಕಾಗುತ್ತದೆ. 
೫.ಪಾಸ್ಪೋರ್ಟ್ ಸೈಜ್ ಫೋಟೋಗಳು : ಅವಲಂಬಿತರು ಮತ್ತು ಸತ್ತ ವ್ಯಕ್ತಿಗಳ ಪಾಸ್ಪೋರ್ಟ್ ಸೈಜ್ ಫೋಟೋಗಳು , ಆದಷ್ಟು ಪ್ರತಿಯನ್ನು ಮಾಡಿಟ್ಟುಕೊಳ್ಳಿ . ಇವು ಎಲ್ಲಿ ಯಾವಾಗ ಬೇಕಾಗುತ್ತವೆ ಎನ್ನಲ್ಲು ಸಾಧ್ಯವಿಲ್ಲ. 
೬. ಸೀನಿಯರ್ ಸಿಟಿಜನ್ ಕಾರ್ಡ್: ಅವಲಂಬಿತರು ವಯೋವೃದ್ಧರಾಗಿದ್ದರೆ ಸೀನಿಯರ್ ಸಿಟಿಜನ್   ಕಾರ್ಡ್  ಮಾಡಿಸಬೇಕು . ಇದಕ್ಕೆ ಅರ್ಜಿ ಮಂಗಳೂರಿನಲ್ಲಿ ಆದರೆ ಬಾಸೆಮೆಂಟ್ನಲ್ಲಿ   ಮಧ್ಯಾಹ್ನ ೨ಘಂಟೆ ನಂತರ ಸೀನಿಯರ್ ಸಿಟಿಜನ್ ಸರ್ವಿಸಸ್ ನಲ್ಲಿ ಸಿಗುತ್ತದೆ. 
೭.ಬ್ಯಾಂಕಿಗೆ ಮಾಹಿತಿ ನೀಡಿ: ತೀರಿಕೊಂಡವರು ಪೆನ್ಷನ್ ಪಡೆಯುತ್ತಿದ್ದರೆ, ಬ್ಯಾಂಕಿಗೆ ಆದಷ್ಟು ಬೇಗ ಮಾಹಿತಿ ನೀಡಿ ಮರಣ ಪತ್ರವನ್ನು ನೀಡಬೇಕು. ಇದು ಅವಲಂಬಿತರಿಗೆ ಪೆನ್ಷನ್ ದೊರೆಯಲು ಸಹಾಯ ಮಾಡುತ್ತದೆ.ನೀವು ಬ್ಯಾಂಕಿನ ಸಹಾಯದಿಂದಲೇ ಪೆನ್ಷನ್ ಪಡೆಯುವ ಎಲ್ಲಾ ಕೆಲಸವನ್ನು ಮಾಡಿ ಮುಗಿಸಬಹುದು. ಮುಂಚೆ ನೀವು ಟ್ರೇಷರಿ ಆಫೀಸಿಗೆ ಹೋಗಬೇಕಿತ್ತು. ಈಗ ಅದರ ಅಗತ್ಯವಿಲ್ಲ.

೮. ಪೆನ್ಷನ್ ಆರ್ಡರ್: ಸತ್ತ ವ್ಯಕ್ತಿ ಪೆನ್ಷನ್ ಪಡೆಯುತ್ತಿದ್ದರೆ ಅವರ ಪೆನ್ಷನ್ ಆರ್ಡರ್ ಪುಸ್ತಕವನ್ನು ಜೋಪಾನವಾಗಿ ಇಟ್ಟುಕೊಳ್ಳಿ. ಇದು ಅವಲಂಬಿತರಿಗೆ ಪೆನ್ಷನ್ ವರ್ಗಾಯಿಸಲು ಸಹಾಯಕಾರಿ. ಇದು ಅತ್ಯಂತ ಮಹತ್ವದ ದಾಖಲೆ. ಪ್ರತಿ ವರ್ಷ ಲೈಫ್ ಸರ್ಟಿಫಿಕೇಟ್ ಪಡೆಯಲು ಇದು ಬೇಕಾಗುತ್ತದೆ.
ಈ ಬ್ಲಾಗಿನಲ್ಲಿ ನನಗೆ ಎಷ್ಟು ನೆನಪಿದೆಯೋ ಅಷ್ಟು ಮಾಹಿತಿಯನ್ನು ಕಲೆ ಹಾಕಿದ್ದೇನೆ.ಇದು ನಿಮಗೆ ಸಹಕಾರಿ ಆದರೆ ನಾನು ಆಭಾರಿಯಾಗುತ್ತೇನೆ.

Comments

Popular posts from this blog

ಮದುವೆಯಾಗಲಿ ಸರಿ ಹೋಗ್ತಾನೆ ಅಂತಾರಲ್ಲ ಯಾಕೆ?

ನಿಮಗೇನಾದರೂ ಅರ್ಥವಾಯಿತೇ???

ಸಾವಿನರಮನೆಯಲ್ಲಿ