Posts

Showing posts from November, 2018

Miracle in Kuala lumpur Hotel- ಅನಿರೀಕ್ಷಿತ

Image
Miracle in Kuala lumpur Hotel- ಅನಿರೀಕ್ಷಿತ- ಇತ್ತೀಚಿಗೆ ಕೌಲ ಲಂಪುರಿಗೆ ಕೆಲಸದ ನಿಮಿತ್ತ ಹೋಗಿದ್ದೆ . ಅದು ಸುಂದರವಾದ ನಗರಿ. ಇಲ್ಲಿ ಇನ್ನೂ ಹಸಿರು ಬಾಕಿ ಉಳಿದಿದೆ. ಕೆಲಸ ಮುಗಿಯುವಾಗ ಮಧ್ಯಾನ್ಹದ ಹೊತ್ತಾಗಿತ್ತು. ಸೂರ್ಯ ನೆತ್ತಿ ಮೇಲೆ ಏರಿದ್ದ. ಹೊಟ್ಟೆ ಚುರುಗುಡುತ್ತಿತ್ತುಇಲ್ಲಿ ಹೊಸಬರಾಗಿದ್ದರೆ, ನೀವು ಗ್ರ್ಯಾಬ್, ಉಬರ್ ನಂತಹ app ಬೇಸ್ಡ್ ಟ್ಯಾಕ್ಸಿಯಲ್ಲಿ ಪಯಣಿಸ ಬಹುದು, ಉಳಿದ ಟ್ಯಾಕ್ಸಿಗಳು ಇವೆ ಆದರೆ ನಿಮ್ಮ ಸುರಕ್ಷತೆ ಬಗ್ಗೆ ಯಾವುದೇ ಮಹಾನಗರಗಳಂತೆ ಗಮನವಿರಲಿ. ಎಲ್ಲಾ ರೀತಿಯ ಜನರಿರುತ್ತಾರೆ. ಆದರೆ ನೀವು ಕಾರನ್ನು ರೆಂಟ್ ಪಡೆದು ಚಲಾಯಿಸುವುದಾದರೆ ಕೆಲವು ವಿಷಯಗಳನ್ನು ಗಮನದಲ್ಲಿ ಇಟ್ಟುಕೊಳ್ಳಬೇಕು. ನಮ್ಮ ದೇಶದಲ್ಲಿರುವಂತೆ ಜನರನ್ನು ಕೇಳಿಕೊಂಡು ದಾರಿ ಹುಡುಕಿ ಕೊಂಡುಹೋಗುವ ಪದ್ಧತಿ ಇಲ್ಲಿ ಇಲ್ಲ. ಅದು ಸಾಧ್ಯವೂ ಇಲ್ಲ. ನೀವು ಜಿಪಿಎಸ್, ಗೂಗಲ್ ಮ್ಯಾಪ್ಸ ಅಥವಾ ವೇಜ್ ಬಳಸಲು ಕಲಿಯಬೇಕು. ಇವು ನಿಮ್ಮ ಗೈಡ್ಗಳಾಗಿ ಸಹಾಯ ಮಾಡುತ್ತವೆ. ಅಲ್ಲಲ್ಲಿ ಸ್ಪೀಡ್ ಟ್ರ್ಯಾಕಿಂಗ್ ಕ್ಯಾಮೆರಾಗಳು  ಇರುತ್ತವೆ. ಹಾಗೆ ಪಾರ್ಕ್ ಮಾಡಬೇಕಾದರೆ ಪಾರ್ಕಿಂಗ್ ಕೂಪನ್ ಉಪಯೋಗಿಸಬೇಕು. ಅದು ಹೆಚ್ಚಿನ ಅಂಗಡಿಗಳಲ್ಲಿ ದೊರಕುತ್ತವೆ. ನಿಮ್ಮ ಫೋನ್ ಸರ್ವಿಸ್ ಮತ್ತುನೆಟ್ವರ್ಕ್ ಸದಾ ಕಾಲ ಆನ್ ಆಗಿರಬೇಕು. . ಇಲ್ಲದಿದ್ದರೆ ಕೆಲವು ಪ್ರೈವೇಟ್ ಪಾರ್ಕಿಂಗ್ ವ್ಯವಸ್ಥೆ ಇರುತ್ತದೆ . ಆದರೆ ಇಲ್ಲಿ ಎಲ್ಲದಕ್ಕೂ ದುಡ್ಡು ಕಟ್ಟಬೇಕು.