Posts

ಕೆಲಸದ ಸ್ಥಳದಲ್ಲಿನ ರಾಜಕೀಯ- Office politics

Image
Office politics:    ಮುಸ್ಸಂಜೆ ಹೊತ್ತಾಗಿತ್ತು , ದೂರದ ಬಾನಲ್ಲಿ ಸೂರ್ಯ   ದಿನದ ಪಯಣ ಮುಗಿಸಿ  ತೆರೆ   ಎಳೆದು  ಅ ಸ್ತಮಾನ ನಾ ಗುತ್ತಿದ್ದ ; ನಿತ್ಯ ಆಫೀಸಿನ ಕಾಯಕವನ್ನು ಮುಗಿಸಿ ಮರಳಿ ಗೂಡಿಗೆ ಸೇರುವ   ನಮ್ಮಂಥ ಸಾಮಾನ್ಯರಂತೆ ; ತನ್ನ ಅಂಗಡಿಯ ಬಾಗಿಲು ಮುಚ್ಚಿ ಹೊರಡುವ ಟೀ ಅಂಗಡಿಯ ಸೊಂಪಣ್ಣನಂತೆ . ನಾವಿಬ್ಬರು ಗೆಳೆಯರು ಹೋಟೆಲ್ ಒಂದರಲ್ಲಿ ಕುಳಿತು ಬೆಚ್ಚಗಿನ ಚಹಾ ಸೇವಿಸುತ್ತಿದ್ದೆವು . ಇದ್ದಕಿದ್ದಂತೆ ನಮ್ಮ ಮಾತು ರಾಜಕೀಯದ ಬಗ್ಗೆ ಹಾಗೂ ನಮ್ಮ ಜೀವನದ ಆಗುಹೋಗುಗಳ ಮೇಲೆ, ಅದರ ಪರಿಣಾಮಗಳ ಬಗ್ಗೆ ತಿರುಗಿತ್ತು .  ಈ ವಿಷಯದ ಚರ್ಚೆ ಬರಲು ಕಾರಣ ಒಬ್ಬ ಸ್ನಾತಕೋತ್ತರ ಪದವಿ ಓದುತ್ತಿದ್ದ ವೈದ್ಯೆಯ ಆತ್ಮಹತ್ಯೆಯ ವರದಿ . ಅವಳು ಹಿರಿಯ ವೈದ್ಯರ ಜಾತಿ ರಾಜಕೀಯದಿಂದ ಬೇಸೆತ್ತು ತನ್ನ ಜೀವವನ್ನು ಬಲಿ ನೀಡಿದ್ದಳು ಎಂದು ಪತ್ರಿಕೆಗಳು ವರದಿ ಮಾಡಿದ್ದವು . ಅದು ಈಗ ತನಿಖೆಯ ವಿಚಾರವಾಗಿದೆ . ಪಾಪ ! ಅವಳು ಒಬ್ಬ ವೈದ್ಯೆಯಾಗಲು ಅದು ಎಷ್ಟು ಶ್ರಮ ಪಟ್ಟಿದ್ದಳೋ ಏನೋ?   ಅವಳ ಪೋಷಕರ ಬಲಿದಾನ , ಅವಳ ಶಿಕ್ಷಕರ ತ್ಯಾಗ , ಹಾಗೂ ಅವಳ ಹಿತಚಿಂತಕರ ಪ್ರಾರ್ಥನೆ ಅವಳನ್ನು ಆ ಸ್ಥಾನಕ್ಕೆ ಕೊಂಡೊಯ್ದಿತ್ತು .   ಆ ಬುದ್ಧಿವಂತ ಹೆಣ್ಣು   ಮಗಳು ರಾಜಕೀಯದ ಬಲಿ ಪಶುವಾಗಿದ್ದರೆ ಅವಳಿಗೆ ಹಲವಾರು ದಾರಿಗಳಿ

ಮುಂಗಾರಿನ ಮೊದಲ ಮಳೆಯ ಬೆನ್ನು ಹಿಡಿದು ಹೋಗಿ......

Image
Image courtesy weather.com ಈ ನಡುವೆ ತುಂಬಾ ವ್ಯಸ್ತನಾಗಿದ್ದೆ. ಬರೆಯಲು ಸಮಯವಿರಲಿಲ್ಲವೆಂದಲ್ಲ, ಸಮಯವಿತ್ತು ಆದರೆ ಕೆಲವೊಮ್ಮೆ ಆತ್ಮಾವಲೋಕನ ಮಾಡಬೇಕಾಗುತ್ತದೆ. ಇಲ್ಲಿ ಮಳೆಗಾಲ ಪ್ರಾರಂಭವಾಗಿದೆ. ನನಗೆ ಚಿಕ್ಕಂದಿನಿಂದಲೇ ಮಳೆಗಾಲವೆಂದರೆ ತುಂಬಾ ಇಷ್ಟ. ಕರಾವಳಿಯಲ್ಲಿ ಮಳೆಗಾಲ ಆರಂಭವಾಯಿತೆಂದರೆ ಮನೆಗಳಲ್ಲಿ ಸಂಭ್ರಮವೋ ಸಂಭ್ರಮ. ನಾವು ಮಕ್ಕಳಿದ್ದಾಗ, ಬೇಸಿಗೆ ರಜೆಯಲ್ಲಿ ಅಜ್ಜಿ- ಅಜ್ಜಂದಿರನ್ನು ಭೇಟಿಯಾಗಲು ಊರಿಗೆ ದೌಡಾಯಿಸುತ್ತಿದ್ದೆವು. ಏಪ್ರಿಲ್ –ಮೇ ತಿಂಗಳಿನಲ್ಲಿ ಮುಂಗಾರು ಪ್ರಾರಂಭವಾಗುವ ಮುಂಚೆ ಒಂದು ಸಾಂಕೇತಿಕ ಮಳೆ ಬರುತಿತ್ತು. ಮುಂಗಾರಿನ ಮೊದಲ ಮಳೆ. ಅದರ ಸೌಂದರ್ಯದ ಪರಿಯನ್ನು  ವಿವರಿಸಬೇಕಾದರೆ  ಕವಿಯಾಗಬೇಕಾಗುತ್ತದೆ. ಬಿಸಿಲಿನ ಬೇಗೆಯಲ್ಲಿ ಬೆಂದ ನೆಲ, ಜಲ, ಪ್ರಕೃತಿಗಳೆಲ್ಲ ಈ ಮಳೆಯಿಂದ ರೋಮಾಂಚನಗೊಂಡು ನಲಿಯುವುದು ಸ್ಪಷ್ಟವಾಗಿ ತೋರುತಿತ್ತು. ಈ ಮಳೆಯಿಂದ ಹಳ್ಳ-ಕೊಳ್ಳಗಳೆಲ್ಲ ತುಂಬಿ ಬಿಗುಮಾನದಿಂದ ಹರಿಯುತ್ತಿದ್ದವು. ಪಕ್ಷಿಗಳ ಚಿಲಿಪಿಲಿ ಕಲರವ ಮುಗಿಲು ಮುಟ್ಟುತ್ತಿತ್ತು. ನಾಯಿ, ಬೆಕ್ಕು, ಅಳಿಲು, ಕೋಳಿಗಳೆಲ್ಲ ಆಟವಾಡತೊಡಗಿ ತಮ್ಮದೇ ಮೂಕ ಶೈಲಿಯಲ್ಲಿ ಸಂಭ್ರಮವನ್ನು ಸಾರುತ್ತಿದ್ದವು. ಅಷ್ಟರಲ್ಲಿ ಸುಳಿ ಮಿಂಚೊಂದು ಸುಳಿದು, ಗುಡುಗೊಂದು ಅಬ್ಬರಿಸಿ ಆಗಸವು ಹೂಂಕರಿಸಿದಾಗ ಮಕ್ಕಳಾದ ನಾವು ಜೋರಾಗಿ ಕೂಗುತ್ತ ಮನೆಯ ಒಳಗಿನ ಜಗಲಿಯಲ್ಲಿ ಕುಳಿತು ಆಟವಾಡುತ್ತಿದೆವು. ಚೆನ್ನಮಣೆ, ಹಾವು-ಏಣಿ ಆಟ, ಕಣ್ಣಾಮುಚ್ಚಾ

ಸಾವು ಸಂಭವಿಸಿದ ನಂತರ ನೀವು ಕೈಗೊಳ್ಳಬೇಕಾದ ೮ ಅಗತ್ಯ ಕಾರ್ಯಗಳು.

ಡೆತ್ ನೋಟ್:   ನಿಮ್ಮ ಡಾಕ್ಟರ್ನಿಂದ ಡೆತ್ ನೋಟ್ ಪ್ರತಿಯನ್ನು   ತೆಗೆದುಕೊಳ್ಳಲು ಖಂಡಿತ ಮರೆಯಬೇಡಿರಿ. ಅದರಲ್ಲಿ ಸತ್ತ ವ್ಯಕ್ತಿಯ   ಸಾವಿನ ಕಾರಣ , ಸಮಯ ಮತ್ತು ಡಾಕ್ಟರ್ ಹಸ್ತಾಕ್ಷರ ಇರುವುದನ್ನು ಖಾತ್ರಿಪಡಿಸಿಕೊಳ್ಳಿ. ಇದು ಮನೆ , ಆಸ್ಪತ್ರೆ ಎಲ್ಲಾ ಕಡೆಗೂ ಅನ್ವಯವಾಗುತ್ತದೆ.   ೨.   ಪಂಚನಾಮೆ ಪತ್ರ:   ಶವಸಂಸ್ಕಾರದ ನಂತರ ಪಂಚನಾಮೆ ಪತ್ರವನ್ನು ಸ್ಮಶಾನದಿಂದಲೇ   ಪಡೆದು ಕೊಳ್ಳಿ. ಇದಕ್ಕೆ ಹೆಚ್ಚಿನ ಹಣ ಖರ್ಚಾಗುವುದಿಲ್ಲ.   ೩.   ಡೆತ್ ಸರ್ಟಿಫಿಕೇಟ್   :   ಮುನ್ಸಿಪಾಲಿಟಿ ಅಥವಾ   ಕಾರ್ಪೋರೇಶನ್ಗೆ   ಹೋಗಿ ಸಾವಿನ ಪತ್ರ (ಡೆತ್ ಸರ್ಟಿಫಿಕೇಟ್ಗೆ) ಅರ್ಜಿ ಪಡೆಯಿರಿ. ಅರ್ಜಿಯನ್ನು ಭರ್ತಿ ಮಾಡಿ ಆದಷ್ಟು ಜಾಸ್ತಿ ಪ್ರತಿಯನ್ನು ಪಡೆದುಕೊಳ್ಳಿ. (ಈಗ ಐದು ಪ್ರತಿವರೆಗೆ ಸಿಗುತ್ತದೆ.) ನಾನು ಅರ್ಜಿ ಸಾಲಿನಲ್ಲಿ ನಿಂತಾಗಲೇ ಒಬ್ಬರು ಕೇವಲ ಎರಡು ಪ್ರತಿ ಪಡೆದುಕೊಂಡು ಅಗತ್ಯ ಕಾರ್ಯಕ್ಕೆ ಪುನಃ ಪಡೆಯಲು ಹೆಣಗಾಡುತ್ತಿದ್ದರು. ಇದು ೧೦ ರಿಂದ ೧೫ ದಿನಗಳವರೆಗೆ   ಹಿಡಿಯುತ್ತದೆ.   ೪.   ಪಾನ್ ಕಾರ್ಡ್:   ಹೆಚ್ಚಾಗಿ ಮನೆಯಲ್ಲೇ ಇರುವ ತಾಯಂದಿರು , ವೃದ್ದರು ಪಾನ್ ಕಾರ್ಡ್ ಮಾಡುವ ಗೋಜಿಗೆ ಹೋಗುವುದಿಲ್ಲ. ಇದನ್ನು ನೀವು ಸರಕಾರಿ ವೆಬ್ಸೈಟ್ ಅಥವಾ ಏಜೆಂಟರ ಮುಖಾಂತರ ಮಾಡಿಸಬಹುದು. ಸತ್ತ ವ್ಯಕ್ತಿ ಸರಕಾರಿ ನೌಕರಿಯಲ್ಲಿದ್ದರೆ ಅಥವಾ ನಿವೃತ್ತಿ ಹೊಂದಿದ್ದರೆ ಅವರ ಅವಲಂಬಿತರಿಗೆ ಪೆನ್ಷನ್ ವರ್ಗಾಯಿಸಲು ಇದು ಬೇಕಾಗುತ್ತದೆ.   ೫. ಪಾ