Posts

Showing posts with the label ಸಾವು

ಸಾವೊಂದು ಸಾವಿರ ಜೀವನಕ್ಕೆ ದಾರಿ.........

Image
ಸಾವು ಬಂದ ಅನಂತರ ಮೊತ್ತ ಮೊದಲು ಕೆಲಸ ಮಾಡಿದ್ದು ಕೇವಲ ಅಸ್ಪತ್ರೆಯ ಬಿಲ್ಲ್ ಕಟ್ಟಿದ್ದಲ್ಲ. ‘ಡೆತ್ ರಿಪೋರ್ಟ್’ ಅನ್ನು ಆಸ್ಪತ್ರೆಯಿಂದ ಪಡೆಯಲು ಮರೆಯಬೇಡ ಎಂದು ಹಿರಿಯರು  ಹೇಳಿದರು.ಅಂತೆಯೇ ಮಾಡಿದೆ. ಆಮೇಲೆ ನೋಡುವ ಎಂದು ಹೇಳಿದರೆ ದಯವಿಟ್ಟು ಕೇಳಬೇಡಿ. ಆಮೇಲೆ ಅನಗತ್ಯ ಓಡಾಟಕ್ಕೆ ಕಾರಣವಾಗುತ್ತದೆ. ಆಮೇಲೆ ಸ್ಮಶಾನದಿಂದ ಪಂಚನಾಮೆ ಪತ್ರವನ್ನು ಪಡೆದುಕೊಂಡು, ಮಂಗಳೂರು ನಗರ ಪಾಲಿಕೆಗೆ ಹೋಗಿ ಡೆತ್ ಸರ್ಟಿಫಿಕೇಟಿಗೆ ಅರ್ಜಿಯನ್ನು ತೆಗೆದುಕೊಳ್ಳಿ. ತುಂಬಿ, ಎಷ್ಟು ಕಾಪಿ ಸಾಧ್ಯವೋ ಅಷ್ಟಕ್ಕೆ ಅರ್ಜಿ ಹಾಕಿ. ಇದು ಪ್ರತಿ ಒಂದು ಕಾರ್ಯಕ್ಕೆ ಮುಂದೆ ಸಹಕಾರಿ ಆಗುತ್ತದೆ.   ಗೆಳೆಯರೊಬ್ಬರು ಅನುಭವ ದಿಂದ ಹೇಳಿದ ಮಾತಿದು. ಮನೆಯವರು ಯಾರಾದರೂ ಸಾವಿನ ಹಾದಿ ಹಿಡಿದರೆ, ಆಗ ಅವರನ್ನು ನೋಡಿಕೊಳ್ಳುವ “ಜವಾಬ್ದಾರಿ ಹೊತ್ತುಕೊಳ್ಳುವವರಿಗೆ’ ಮೂರು ಹಂತಗಳಲ್ಲಿ ಕಷ್ಟ ಎದುರಾಗುತ್ತದೆ. ನಾನು ಯಾಕೆ ಹಾಗೆ ಹೇಳಿದೆ ಎಂದರೆ ಇದು ಅನೇಕರ ಅನುಭವ. ಕೆಲವರು ಮಾತ್ರ ಸ್ವಯಂ ಸ್ಫೂರ್ತಿಯಿಂದ ಜವಾಬ್ದಾರಿಯನ್ನು ಆರಿಸುತ್ತಾರೆ ಪೂರೈಸುತ್ತಾರೆ. ಉಳಿದವರು ಕೇವಲ ದುಃಖಿಸಿ ಅಗತ್ಯವಾದ ಸಮಯದಲ್ಲಿ ನುಣುಚಿ ಕೊಳ್ಳುತ್ತಾರೆ. ಆ ಸಾವಿನ ಸಾಕ್ಷಾತ್ ದರ್ಶನವಾದಗಲೂ ವಿಧ ವಿಧದ ಲೆಕ್ಕಾಚಾರ ಹಾಕುತ್ತ ಕುಳಿತು ಆಶ್ಚರ್ಯ ಮೂಡಿಸುತ್ತಾರೆ. ಈಗ ನೀವು ಜವಾಬ್ದಾರಿ ಹೊತ್ತುಕೊಂಡೀರೆಂದರೆ ನಿಮಗೆ ಪ್ರಥಮ ಹಂತದ ನರಕ ಆಸ್ಪತ್ರೆಯಲ್ಲಿ ದರ್ಶನವಾಗುತ್ತದೆ. ನೀವು ನಿಮ...

ಜೀವನ ಇಂದು ಮಗ್ಗುಲು ಬದಲಿಸಿತ್ತು

Image
ಜೀವನ ದಲ್ಲಿ ಗುರು ಎಂಬ ಶಬ್ದ ನಮ್ಮ ಜೀವನದಲ್ಲಿ ಅತ್ಯಂತ ಪ್ರಮುಖವಾದದ್ದು. ತಂದೆ,ತಾಯಿ ಜೀವನದ ಮೊದಲ ಗುರುಗಳು. ನಮಗೆ ಜೀವನದಲ್ಲಿ ದಾರಿ ದೀಪವಗುವುದು ಗುರುಗಳ ಮಾರ್ಗದರ್ಶನ. ಅಪ್ಪ ಕಾಲದಲ್ಲಿ ಲೀನವಾಗಿ ಹೋದರು. ನಾನು ಜೀವನದ ದೊಡ್ಡ ಗುರುಗಳನ್ನು ಕಳೆದುಕೊಂಡು ಬಿಟ್ಟಿದ್ದೆ.  ಅವರು ಕೊನೆಗೆ ಪಡುತ್ತಿದ್ದ ಕಷ್ಟ ಮಕ್ಕಳಾದ ನಮಗೆ ಸಹಿಸಲು ಅಸಾಧ್ಯವಗಿತ್ತು. ಇನ್ನು ಅವರೆಷ್ಟು ಮೌನವಾಗಿ ನರಳಾಡಿದರೋ ನನಗೆ ಗೊತ್ತಿಲ್ಲ. ಅಂದು ನಾನಿದ್ದ ಅಸ್ಪತ್ರೆಯ ವಾರ್ಡಿನಲ್ಲಿ ಎರಡು ಸಾವನ್ನು ಕಂಡೆ. ಇಬ್ಬರೂ ಎಪ್ಪತ್ತರ ಹರೆಯದವರು. ಸಾವಿಗಿಂತ ಮುಂಚೆ ಸಾಕಷ್ಟು ಹೋರಾಡಿದರು, ನರಳಿದರು ಆದರೆ ಸೋತರು. ಆದರೆ ಕಾಲವಾದ ನಂತರ, ದೇಹದ ಕಾವು ಅರುತ್ತಿರುವಾಗ ಒಂದು ಪ್ರಶಾಂತವಾದ ಪ್ರಭಾವಳಿಯನ್ನು ಕಂಡೆ. ಅದು ನನ್ನ ಭ್ರಮೆ ಇರಬೇಕೆಂದು ಅಂದು ಕೊಂಡೆ. ಆದರೆ ಇಬ್ಬರಲ್ಲೂ ಒಂದೇ ರೀತಿಯ ಭಾವನೆಗಳನ್ನು ಭ್ರಮಾಧೀನನಾಗಿ ಕಾಣಲು ಸಾಧ್ಯವೇ? ಅದೂ ಎಂಟು ಗಂಟೆಗಳ ನಡುವೆ? ಬದುಕುವ ಹೋರಾಟದಲ್ಲಿ   ಸೋತ ಅನಂತರ ಕೆಲವು ಗಳಿಗೆ ಒಳಗಾಗಿ ದೇಹದಲ್ಲಿ ನಿಧಾನವಾಗಿ ಸಾವಿನ ಅನಂತರದ ಜೈವಿಕ ಪ್ರಕ್ರಿಯೆಗಳು ಸಾಗುತ್ತವೆ. ಎಲ್ಲವೂ ಪ್ರಕೃತಿಯ ಅದ್ಭುತವೆಂದೇ ಹೇಳಬೇಕು. ಹೆಣ್ಣು ಗರ್ಭ ಧರಿಸುವಾಗ ಪ್ರಕೃತಿಯು ಸಂಭ್ರಮದಿಂದ ಅವಳನ್ನು ಒಂದು ಜೀವಾತ್ಮಕ್ಕೆ ಆಶ್ರಯ ನೀಡಲು ತಯಾರಿಸುತ್ತದೆ, ಅಂತೆಯೇ ಮರಣದ ಅನಂತರ ಪಾರ್ಥಿವ ಶರೀರವನ್ನು ಜೀರ್ಣಿಸುವ ಪ್ರಕ್ರಿಯೆ ಆರಂಭಗೊಳ್ಳುತ್...