ಸಾವು ಸಂಭವಿಸಿದ ನಂತರ ನೀವು ಕೈಗೊಳ್ಳಬೇಕಾದ ೮ ಅಗತ್ಯ ಕಾರ್ಯಗಳು.
ಡೆತ್ ನೋಟ್: ನಿಮ್ಮ ಡಾಕ್ಟರ್ನಿಂದ ಡೆತ್ ನೋಟ್ ಪ್ರತಿಯನ್ನು ತೆಗೆದುಕೊಳ್ಳಲು ಖಂಡಿತ ಮರೆಯಬೇಡಿರಿ. ಅದರಲ್ಲಿ ಸತ್ತ ವ್ಯಕ್ತಿಯ ಸಾವಿನ ಕಾರಣ , ಸಮಯ ಮತ್ತು ಡಾಕ್ಟರ್ ಹಸ್ತಾಕ್ಷರ ಇರುವುದನ್ನು ಖಾತ್ರಿಪಡಿಸಿಕೊಳ್ಳಿ. ಇದು ಮನೆ , ಆಸ್ಪತ್ರೆ ಎಲ್ಲಾ ಕಡೆಗೂ ಅನ್ವಯವಾಗುತ್ತದೆ. ೨. ಪಂಚನಾಮೆ ಪತ್ರ: ಶವಸಂಸ್ಕಾರದ ನಂತರ ಪಂಚನಾಮೆ ಪತ್ರವನ್ನು ಸ್ಮಶಾನದಿಂದಲೇ ಪಡೆದು ಕೊಳ್ಳಿ. ಇದಕ್ಕೆ ಹೆಚ್ಚಿನ ಹಣ ಖರ್ಚಾಗುವುದಿಲ್ಲ. ೩. ಡೆತ್ ಸರ್ಟಿಫಿಕೇಟ್ : ಮುನ್ಸಿಪಾಲಿಟಿ ಅಥವಾ ಕಾರ್ಪೋರೇಶನ್ಗೆ ಹೋಗಿ ಸಾವಿನ ಪತ್ರ (ಡೆತ್ ಸರ್ಟಿಫಿಕೇಟ್ಗೆ) ಅರ್ಜಿ ಪಡೆಯಿರಿ. ಅರ್ಜಿಯನ್ನು ಭರ್ತಿ ಮಾಡಿ ಆದಷ್ಟು ಜಾಸ್ತಿ ಪ್ರತಿಯನ್ನು ಪಡೆದುಕೊಳ್ಳಿ. (ಈಗ ಐದು ಪ್ರತಿವರೆಗೆ ಸಿಗುತ್ತದೆ.) ನಾನು ಅರ್ಜಿ ಸಾಲಿನಲ್ಲಿ ನಿಂತಾಗಲೇ ಒಬ್ಬರು ಕೇವಲ ಎರಡು ಪ್ರತಿ ಪಡೆದುಕೊಂಡು ಅಗತ್ಯ ಕಾರ್ಯಕ್ಕೆ ಪುನಃ ಪಡೆಯಲು ಹೆಣಗಾಡುತ್ತಿದ್ದರು. ಇದು ೧೦ ರಿಂದ ೧೫ ದಿನಗಳವರೆಗೆ ಹಿಡಿಯುತ್ತದೆ. ೪. ಪಾನ್ ಕಾರ್ಡ್: ಹೆಚ್ಚಾಗಿ ಮನೆಯಲ್ಲೇ ಇರುವ ತಾಯಂದಿರು , ವೃದ್ದರು ಪಾನ್ ಕಾರ್ಡ್ ಮಾಡುವ ಗೋಜಿಗೆ ಹೋಗುವುದಿಲ್ಲ. ಇದನ್ನು ನೀವು ಸರಕಾರಿ ವೆಬ್ಸೈಟ್ ಅಥವಾ ಏಜೆಂಟರ ಮುಖಾಂತರ ಮಾಡಿಸಬಹುದು. ಸತ್ತ ವ್ಯಕ್ತಿ ಸರಕಾರಿ ನೌಕರಿಯಲ್ಲಿದ್ದರೆ ಅಥ...