Posts

Showing posts from July, 2018

ಜರಾಯು

ಪ್ಲಾಸೆಂಟ( ಜರಾಯು) ತಾಯಿಗೂ ಮಗುವಿಗೂ ಜನ್ಮಜಾತ ಸಂಬಂಧ ಕಲ್ಪಿಸುವ ಒಂದು ಜೀವಂತ, ಪವಾಡ ಸದೃಶ, ಜೈವಿಕ   ಕೊಂಡಿ . ಅದು ತಾಯಿಯ ಗರ್ಭದಲ್ಲಿ ಮಗುವಿಗೆ ಜೀವನದಲ್ಲಿ ಬೇಕಾಗಿರುವ ಸಕಲ ರೀತಿಯ ಘಟಕಗಳನ್ನು ಹೊಂದಿರುವೆ ಅಮೃತ ರೂಪಿ ಅಮ್ನಿಯೋಟಿಕ್ ದ್ರವವನ್ನು ಸಾಗಿಸುವ ವಾಹಿನಿ. ನಾವು ಭಾವಿಸಿದಂತೆ ಹೆತ್ತಕೂಡಲೇ ಅದು ನಿರರ್ಥಕವಾಗುವುದಿಲ್ಲ. ಈ ಅಧುನಿಕ ಯುಗದಲ್ಲಿ ಅದನ್ನು stem cell therapy ಗೆ ಬಳಸುತ್ತಾರೆ. ಇದು ಸಂಜೀವಿನಿಗಿಂತ ಯಾವುದೇ ರೂಪದಲ್ಲಿ ಕಡಿಮೆ ಇಲ್ಲ . ಆದರೆ ಒಬ್ಬ ಕಥೆಗಾರನ ದೃಷ್ಟಿಕೋನದಲ್ಲಿ ಅದರ ಅರ್ಥವು ಜೀವನದ ಬೇರೆ ಬೇರೆ ಹಂತಗಳಲ್ಲಿ ಬದಲಾಗುತ್ತ ಸಾಗುತ್ತದೆ. ನವಜಾತ ಶಿಶುವು ತಾಯಿಯ ಗರ್ಭದಿಂದ ಮುಕ್ತಿ ಹೊಂದಿದ ಕೂಡಲೇ ಜರಯುವಿನ ಅಸ್ತಿತ್ವವು ಮುಗಿಯುತ್ತದೆ ಎಂದು ಪ್ರತೀತಿ.   ಅದನ್ನು ಕತ್ತರಿಯಿಂದ ಕತ್ತರಿಸಿದಾಗ ಹಾವಿನಂತೆ ಸುರುಳಿ ಕಟ್ಟಿಕೊಳ್ಳುತ್ತದೆ. ಅದು ಕಂದನು ತಾಯಿಯ ಗರ್ಭದಿಂದ ಮುಕ್ತಿ ಪಡೆಯುವ ಪ್ರಥಮ ಸಂಕೇತ.   ಆದರೆ ಒಂದು ಜೀವಿಯು ಸಂಪೂರ್ಣವಾಗಿ ಸ್ವತಂತ್ರನಾಗಲು ಹಲವು ವರುಷಗಳೇ ಕಳೆದು ಹೋಗುತ್ತವೆ. ಸ್ವಾತಂತ್ರ್ಯ ಪಡೆದರೂ ಹೆತ್ತವರ ಋಣ ಆ ಜರಾಯುವಿನೊಂದಿಗೆ ಬಳ್ಳಿಯಂತೆ ಸುತ್ತಿಕೊಂಡು ಜೀವದಲ್ಲಿ ಅಂತರ್ಧಾನವಾಗಿ ಹೋಗುತ್ತದೆ. ಈ ಬಂಧನವನ್ನು ತೀರಿಸಲು ಏಳೇಳು ಜನ್ಮಗಳು ಸಾಕಾಗುವುದಿಲ್ಲ. ಆದರೆ ಜೈವಿಕ   ದೃಷ್ಟಿಕೋನದಲ್ಲಿ ನೋಡುವುದಾದರೆ ಇದು ಪ್ರತಿಯೊಂದು ಸಸ್ತನಿಗಳ ( Mammals) ವಂಶ ಮುಂದುವರೆಯಲು

ನಿಮಗೇನಾದರೂ ಅರ್ಥವಾಯಿತೇ???

ನನ್ನ ಹಿಂದಿನ ಬ್ಲಾಗ್ನಲ್ಲಿ ಯಾವುದಕ್ಕೂ ಸಲ್ಲದವನ ಬಗ್ಗೆ ಬರೆದಿದ್ದೆ. ತುಂಬಾ ಜನ ಓದಿದಿರಿ, ಬೆನ್ನು ಚಪ್ಪರಿಸಿದಿರಿ, ಹೃತ್ಪೂರ್ವಕ ಧನ್ಯವಾದಗಳು. ಇವತ್ತು ನನ್ನ ಗೆಳೆಯನ ಹಿತವಚನಗಳ ಬಗ್ಗೆ ಬರೆಯುತ್ತೇನೆ. ಎಲ್ಲ ಗೆಳೆಯರೂ ಹೀಗಂತ ಅರ್ಥೈಸಬೇಡಿ. ಈ ನನ್ನ ಗೆಳೆಯ, ನನ್ನಂತೆ “ವೇಸ್ಟ್ ಬಾಡಿಗಳ” ಸಂಘದಲ್ಲೋಬ್ಬನು. ಆದರೆ ಅವನ   ಬಾಳಿನ ಒಳನೋಟ ಎಷ್ಟು ಅದ್ಭುತ ಅನ್ನೋದು ಸಮಯ ಬಂದಾಗಲೇ ತಿಳಿದಿದ್ದು. ಅವನೇನು ಮಹಾಮೇಧಾವಿಯಲ್ಲ. ಆದರೂ ಅವನ ಹಿತ ವಚನವನ್ನು ಶೇರ್ ಮಾಡಬೇಕು ಅನಿಸ್ತು.   ದೇಶವನ್ನು ಬಿಟ್ಟು ಬರುವುದು ಸುಲಭದ ನಿರ್ಧಾರವಾಗಿರಲಿಲ್ಲ, ಅಗದೂ ಕೂಡ. ಇಷ್ಟು ವರ್ಷ ನನ್ನದು, ನಾನು ಎಂದು ಕೊಂಡದ್ದೆಲ್ಲ ಕೆಲವೇ ಕ್ಷಣದಲ್ಲಿ ಮಾಯವಾಗುವಂತ ಪರಿಸ್ಥಿತಿ. ಅಲ್ಲಿ ಹೇಗೋ? ಏನೋ ಎಂಬ ಆತಂಕ ಮನಸ್ಸನ್ನು ಅಲ್ಲೋಲಕಲ್ಲೋಲ ಮಾಡಿದ್ದಂತೂ ಸತ್ಯ ಕಣ್ರೀ. ಇನ್ನೂ ಈ ವಿಷಯ ಆಪ್ತರಲ್ಲಿ ಹೇಳಿಕೊಂಡಿರಲಿಲ್ಲ. ನಾನು ಅಂದು ತುಂಬಾ ವಿಚಲಿತನಗಿದ್ದೆ. ಆಗ ನನ್ನ ಗೆಳೆಯನೋಬ್ಬನು ಅಚಾನಕವಾಗಿ ಮನೆಗೆ ಬಂದ, ಅವನು ಸುಮಾರು ೧೦ ವರುಷಗಳಿಂದ ವಿದೇಶದಲ್ಲಿ ವಾಸವಗಿದ್ದವನು, ಅಮ್ಮ ಟೀ ಮಾಡಿ ತಂದುಕೊಟ್ಟರು. ಎಲ್ಲರ ಯೋಗ ಕ್ಷೇಮ ವಿಚಾರಿಸಿಯಾದ ಮೇಲೆ, ಅಪ್ಪ ಭಾರವಾದ ಮನಸ್ಸಿನಿಂದ “ ಮಗ, ನಮ್ಮನ್ನೆಲ್ಲ ಬಿಟ್ಟು ವಿದೇಶಕ್ಕೆ ಹೋಗುತ್ತಿದಾನೆ” ಅಂದರು. ಅವನು ನನ್ನನ್ನು ಒಮ್ಮೆ ದಿಟ್ಟಿಸಿ ನೋಡಿದ. ನನ್ನ ವ್ಯಾಕುಲತೆಯನ್ನು ಕ್ಷಣ ಮಾತ್ರದಲ್ಲಿ ಅರ್ಥೈಸಿ, “ಬಾ, ಹೊರಗೆ
ಯಾವುದಕ್ಕೂ ಸಲ್ಲದವನು ಈ ಶೀರ್ಷಿಕೆ ನಾನು ಯಾಕೆ ಆಯ್ಕೆ ಮಾಡಿದೆನೆಂದು ಕುತೂಹಲ ನಿಮ್ಮಲಿದೆಯೇ? ಹಾಗಾದರೆ ನನ್ನ ಕಥೆ ಓದಿ. ಹಣ ನಮ್ಮ ಜೀವನದ ಅವಿಭಾಜ್ಯ ಅಂಗ. ಹಣದ ಉಪಯುಕ್ತತೆ ನಮ್ಮೆಲ್ಲರಿಗೆ ಗೊತ್ತಿರುವಂಥ ವಿಷಯವೇ. ನಾನು ಬಾಲಕನಗಿದ್ದಾಗ ಹಣ ನನ್ನ ತಂದೆಯವರ ಹತ್ತಿರ ಇದೆ. ಅವರು ನಾನು ಚೆನ್ನಾಗಿ ಓದಿದರೆ ನನಗಿಷ್ಟವಾದ ಬಟ್ಟೆ, ಚಾಕಲೇಟ್, ಶಾಲೆಯ ಫೀ, ಹೀಗೆ ನೂರಾರು ವಸ್ತುಗಳು ಕೊಡಿಸುತ್ತಾರೆ ಎಂದು ಅಮ್ಮ ಪದೇ ಪದೇ ಹೇಳುತ್ತಿದ್ದ ಅರ್ಧ ಸತ್ಯವನ್ನು ನಂಬಿ, ಓದುವುದು ನನ್ನ ಧರ್ಮ, ಓದಿದರೆ ಎಲ್ಲವೂ ಸಿಗುವುದೆಂಬ ಭಾವನೆಯಿಂದ ಕಲಿತದ್ದೇ ಬಂತು. ನಮ್ಮದು ಹೇಳಿ ಕೇಳಿ ಮಧ್ಯಮ ವರ್ಗದ ಕುಟುಂಬ. ನಮಗೆ ಓದದೇ ಬೇರೆ ವಿಕಲ್ಪವೇ ಇರಲಿಲ್ಲ . ನಮ್ಮ ಕುಂದು ಕೊರತೆಗಳನ್ನು, ಹೆತ್ತವರು ಅದು ಹೇಗೋ ಹೊಟ್ಟೆ ಬಟ್ಟೆ ಕಟ್ಟಿ ತೀರಿಸಿದರು. ಇಬ್ಬರು ಮಕ್ಕಳ ಶಾಲೆ, ಬಟ್ಟೆ ಹಾಗು ಹಸಿವಿನ ಕೊರತೆಯನ್ನು ತಪಸ್ಸಿನಂತೆ ನಿಭಾಯಿಸುತಿದ್ದರು. ನನಗೆ ಕಾಲೇಜು ಮೆಟ್ಟಿಲು ಏರಿದಾಗಲೇ ದುಡ್ಡಿನ ಮಹಿಮೆಯ ಕೊಂಚ ಅರಿವಾದದ್ದು ಕಣ್ರೀ. ಸಂಗಡಿಗರೆಲ್ಲ ಸ್ಪೆಷಲ್ ತರಬೇತಿ, ಅದು ಇದು ಅಂತ ಓಡಾಡ ತೊಡಗಿದಾಗ, ನನಗು ಅದು ಬೇಕೆಂದು ಅಮ್ಮನಲ್ಲಿ ಹಠ ಮಾಡಿದಾಗ, ಮಗುವಿನ ಅಸೆ ಪೂರಿಸಲಾಗದ ಅಸಹಾಯಕತೆ ಕೋಪದ ರೂಪ ತಾಳಿ ಚೆನ್ನಾಗಿ ತದುಕಿದ್ದಳು. ಆಗ ಅಪ್ಪ ಬಂದು ಕಣ್ಣಿರು ಒರಸಿ, ಅಪ್ಪಿಕೊಂಡು, ಸಾಂತ್ವನ ಗೈದಿದ್ದರು. ಸಹಪಾಠಿಗಳು ನಾವು ಆ ಇಂಜಿನಿಯರಿಂಗ್ ಕಾಲೇಜು, ಈ ಮೆಡಿಕಲ್