Posts

Showing posts from September, 2018

Heart: ಹೃದಯಕ್ಕೆ ಏಕೆ ನಾಲ್ಕು ಕೋಣೆಗಳು ?

Image
ಹೃದಯ ಅಂದರೆ ಅನೇಕ ಅರ್ಥಗಳು ನಮ್ಮಲ್ಲಿ ಮೂಡುತ್ತವೆ. ವೈದ್ಯಕಿಯವಾಗಿ ಇರುವ ಅರ್ಥವೇ ಬೇರೆ, ನಮ್ಮಂಥ  ಸಾಮಾನ್ಯರ ಮನಸ್ಸಿನಲ್ಲಿ ಮೂಡುವ ಅರ್ಥವೇ ಬೇರೆ. ನಮ್ಮ ಮನಸ್ಸಿನ ಹಾಗು “ ಬ್ರಹ್ಮನ್ “ ನ ಸ್ಥಾನ ಹೃದಯವೆಂದು ಪುರಾಣಗಳು ಹೇಳುತ್ತವೆ. ಅದರ ಸತ್ಯಾಸತ್ಯತೆ ಬಗ್ಗೆ ವಾದ-ವಿವಾದ ಈಗ ಬೇಡ. ಪ್ರೇಮಿಗೆ ಹೃದಯ ಪ್ರೀತಿಯ ಸಂಕೇತ. ಹೆತ್ತವರಿಗೆ ಹೃದಯ ಮಮತೆಯ ಸಂಕೇತ. ಭಕ್ತನಿಗೆ ಅದು ಭಕ್ತಿ ಭಾವದ ಸಂಕೇತ, ಕಲಾರಾಧಕನಿಗೆ ಕಲೆಯ ಸಂಕೇತ. ಆಧ್ಯಾತ್ಮದಲ್ಲಿ ಹೃದಯ ನಿರಂತರ ಸತ್ಯದ ಸಂಕೇತ. ಹೀಗೆ ನಾಮ ಒಂದಾದರೂ ಇದರ ಭಾವ ಹಲವು. ಗಾತ್ರದಲ್ಲಿ ಪುಟ್ಟದಾದರೂ ಕಾರ್ಯ ಹಿರಿದು.ಮಾನವ ಭಾವನಾತ್ಮಕವಾದ ಜೀವಿ. ನಮ್ಮ ಭಾವನೆಗಳೆಲ್ಲ ಕೂಡಿಡುವುದು ನಮ್ಮ ಹೃದಯದಲ್ಲಿ. ಹೃದಯದಾಳದಿಂದ ಬಂದ ಮಾತೆಂದರೆ ಸತ್ಯವಾದ ವಚನ ಎಂದು ಅರ್ಥ. ಹೃದಯ ತಾಯಿಯ ಗರ್ಭದಲ್ಲಿ ಬಡಿಯಲು ಆರಂಭಿಸಿ ಬದುಕಿನಾದ್ಯಂತ ನಿರಂತರವಾಗಿ ದುಡಿಯುತ್ತದೆ. ಒಂದೇ ಒಂದು ಕ್ಷಣ ಅದು ಬಡಿತ ನಿಲ್ಲಿಸಿದರೂ ಎಲ್ಲವೂ ಸ್ತಬ್ಧವಾಗುತ್ತದೆ. ಮೆದುಳು ನಿಷ್ಕ್ರಿಯವದರೂ ಹೃದಯ ಮಾತ್ರ ತನ್ನ ಕೆಲಸವನ್ನು ಶ್ರದ್ದೆಯಿಂದ ಮಾಡುತ್ತಾ ಸಾಗುತ್ತದೆ. ಅದು ನಿಲ್ಲುವುದು ಒಂದೇ ಬಾರಿ. ಅದು ನಿಂತಾಗ ನಮ್ಮ ಭೌತಿಕ ಶರೀರ ತನ್ನ ಅಸ್ಥಿತ್ವವನ್ನು ಶಾಶ್ವತವಾಗಿ ಕಳೆದುಕೊಳ್ಳುತ್ತದೆ, ಅದು ಒಂದು ಅದ್ಭುತವಾದ ಯಂತ್ರ. ಜಾತಿ-ಮತ, ಮೇಲು-ಕೀಳು, ಹಿರಿಯ-ಕಿರಿಯ, ಬಡವ ಬಲ್ಲಿದನೆಂದು ತಾರತಮ್ಯವನ್ನು ಮಾಡದೇ ತನ್ನ ಕೆಲಸವನ್ನ

Friendship: ಗೆಳೆಯರಿರಬೇಕು ಯಾಕೆ ಗೊತ್ತಾ ???

Image
ಸರಕಾರಿ ನೌಕರರ    ಬದುಕು ಅಲೆಮಾರಿ ಬದುಕು. ಎಷ್ಟು ವರ್ಷಕ್ಕೆ ನಿಮಗೆ ವರ್ಗಾವಣೆ ಆಗುತ್ತದ್ದೋ ಅದು ನಿಮ್ಮ ಇಲಾಖೆಯ ಮೇಲೆ ಹೊಂದಿಕೊಂಡು ಇರುತ್ತದೆ. ನಮ್ಮ ತಂದೆಗೆ ಪ್ರತಿ ಮೂರು ವರುಷಕ್ಕೊಮ್ಮೆ ವರ್ಗಾವಣೆ ಆಗುತ್ತಿತ್ತು. ನಾವು ಒಂದು ಊರಿಗೆ ಬಂದು ಅಲ್ಲಿನ ಸಂ ಸ್ಕೃತಿ , ಭಾಷೆ , ಉಡುಗೆ ತೊಡುಗೆ , ಆಚಾರ-ವಿಚಾರದ   ವೈವಿಧ್ಯತೆಯನ್ನು ತಿಳಿದುಕೊಳ್ಳುವುದರೊಳೊಗೆ ಅಪ್ಪನಿಗೆ ಬೇರೆಡೆ ವರ್ಗಾವಣೆ ಆಗುತ್ತಿತ್ತು. ಮತ್ತೆ ಪುನಃ ಹೊಂದಾಣಿಕೆಯ ಕಾರ್ಯ ಶುರುವಾಗುತ್ತಿತ್ತು. ಇದು ನೋವು ಹಾಗೂ ದಣಿವನ್ನು ಮೂಡಿಸುತಿತ್ತು. ಆಗ ನಮಗೂ ಎಲ್ಲರ ಹಾಗೆ ಒಂದೇ ಕಡೆ ಇರುವ ಭಾಗ್ಯವಿಲ್ಲವೇ ಭಗವಂತ ಎಂದು ಬೇಡಿಕೊಂಡದ್ದು ಉಂಟು.   ಆಗ ಕಷ್ಟವೆನಿಸಿದರೂ ಇಂದು ಬಾಳಿನ ಪಯಣವನ್ನು ಮೆಲುಕು ಹಾಕುವಾಗ ನಾನು ಕಳೆದುಕೊಂಡದ್ದಕ್ಕಿಂತಲೂ ಪಡೆದುಕೊಂಡದ್ದೇ ಹೆಚ್ಚು. ಯಾವುದೇ ಊರಾಗಲಿ , ರಾಜ್ಯ , ದೇಶವಾಗಲಿ ಒಂದು ಎರಡು ದಿನ ಚಂದ ಕಂಡರೂ , ಅಲ್ಲಿ ಬಾಳಬೇಕಾದರೆ ನಿಮ್ಮ ಗೆಳೆಯರ ಬಳಗ ನಿಮ್ಮ ಕುಟುಂಬದಷ್ಟೇ ಮುಖ್ಯ. ಆ ಜಾಗದ ಮಧುರ ನೆನಪುಗಳು ಇವರಿಂದ ಮಾತ್ರ ಸೃಷ್ಟಿಸಲ್ಪದುತ್ತದೆ. ಗೆಳೆತನ ಎಂಬ ನಾಲ್ಕಕ್ಷರದ ಪದ ನಮ್ಮ ಜೀವನದ ಜೀವನಾಡಿ. ಒಳ್ಳೆಯ ಗೆಳೆಯರೋ , ಕೆಟ್ಟ ಗೆಳೆಯರೋ - ಇಬ್ಬರೂ ನಿಮ್ಮ ಜೀವನದ ಮೇಲೆ ಅಗಾಧವಾದ ಪರಿಣಾಮವನ್ನು ಬೀರುತ್ತಾರೆ.   ವೇದೋಪನಿಷತ್ತುಗಳು ನಾವೆಲ್ಲರೂ ‘ಬ್ರಹ್ಮನ್’ ಎಂದು ಹೇಳುತ್ತದೆ. ಅದನ್ನೇ ಹಲವು ಮಹಾನುಭಾವರು ‘ಪರಬ್ರಹ್

ಸಾವು ಗುರುವಾದಾಗ........

Image
ಗುರು ನಮ್ಮ ಜೀವನದ ಒಂದು ಪ್ರಮುಖ ಅಂಗ. ಗುರುವಿನ ಅಗತ್ಯಗಳ ಬಗ್ಗೆ ವರ್ಣಿಸುವುದು ಅಸಾಧ್ಯ ಕಾರ್ಯ. ತಾಯಿ- ತಂದೆಯರೇ ಮಗುವಿನ ಪ್ರಥಮ ಗುರು. ಅವರು ನಮ್ಮ ಜಗತ್ತು, ಸಮಾಜದಲ್ಲಿ ಬದುಕಲು ಪಾಲಿಸಬೇಕಾದ ನಿಯಮ, ಶಿಷ್ಟಾಚಾರ ಹೀಗೆ ಅನೇಕ ವಿಷಯಗಳ ಬಗ್ಗೆ ಜೀವನದಾದ್ಯಂತ ಶಿಕ್ಷಣ ಕೊಡುತ್ತ ನಮ್ಮ ಜೀವನಕ್ಕೆ ಸಾರ್ಥಕ್ಯವನ್ನು ಕೊಡುತ್ತಾರೆ. ನಂತರದ ಸ್ಥಾನ ನಮಗೆ ಸಿಗುವ ಗುರುವಿಗೆ. ಸದ್ಗುರು ಪಡೆಯಲು ನಾವು ಹಿಂದಿನ ಜನ್ಮದ ಪುಣ್ಯವೇ ಕಾರಣವಾಗುತ್ತದೆ. ಸದ್ಗುರುಗಳು ನಮ್ಮನ್ನು ಕೇವಲ ಪಾಠಮಾಡಿ, ಶಿಕ್ಷೆಯನ್ನು ನೀಡಿ, ಪರೀಕ್ಷೆಯನ್ನು ನೀಡಿ, ಪಾಸೋ ನಪಾಸೋ ಎಂದು ಯೋಗ್ಯತೆಯನ್ನು ಅಳಿದು, ಒಳ್ಳೆ ಹಾಗು ಕೆಟ್ಟ ವಿಧ್ಯರ್ಥಿಗಳೆಂದು ಪಟ್ಟ ಕಟ್ಟಿ, ತಮ್ಮ ಕೆಲಸ ಮುಗಿಸಿ ಜಾಗ ಖಾಲಿ ಮಾಡುವವರಲ್ಲ. ಸದ್ಗುರುಗಳು ಶಿಷ್ಯನಲ್ಲಿರುವ ಒಳ್ಳೆ ಹಾಗು ಕೆಟ್ಟ ಗುಣಗಳನ್ನು ಅಳೆದು, ಅವನನ್ನು ಪ್ರೋತ್ಸಾಹಿಸಿ, ಕತ್ತಲೆಯಿಂದ ಬೆಳಕಿನೆಡೆಗೆ, ಕೆಟ್ಟ ಗುಣಗಳಿಂದ ಸದ್ಗುಣಗಳೆಡೆಗೆ, ಹಾಗೂ ಇನ್ನೂ ಕೆಲವರು ಸಾವಿನಿಂದ ಅಮರತ್ವದೆಡೆಗೆ ಸಾಗಿಸುತ್ತಾರೆ. ಹಾಗಾಗಿ ನೂರಾರು ವರುಷಗಳ ಹಿಂದೆ ಗುರುಕುಲ ಪದ್ದತಿಯಲ್ಲಿ ಶಿಷ್ಯನನ್ನು ಗುರುವಿನೊಂದಿಗೆ, ಅವರ ಕುಟೀರದಲ್ಲಿ ವಾಸಮಾಡಿ ಜ್ಞಾನಾರ್ಜನೆ ಮಾಡಲು ಕಳುಹಿಸಿಕೊಡುತ್ತಿದ್ದರು. ಅವನು ರಾಜಕುಮಾರನೇ ಇರಲಿ ಇಲ್ಲ, ಬಡ ಭಿಕ್ಷುಕನೆ ಇರಲಿ, ಗುರುಗಳು ಎಲ್ಲರನ್ನು ಸಮಾನ ದೃಷ್ಟಿಯಿಂದ ನೋಡಿ, ವಿಧ್ಯಾರ್ಥಿಗೆ ಜ್ಞಾನದ ಹಸಿವು ಎಷ್ಟಿದ