Heart: ಹೃದಯಕ್ಕೆ ಏಕೆ ನಾಲ್ಕು ಕೋಣೆಗಳು ?



Heart, Chambers,life, beautiful, poem, ಹೃದಯ, ಜೀವನ , ಕೋಣೆಗಳು , ಸೌಂದರ್ಯ, ಕವಿತೆ


ಹೃದಯ ಅಂದರೆ ಅನೇಕ ಅರ್ಥಗಳು ನಮ್ಮಲ್ಲಿ ಮೂಡುತ್ತವೆ. ವೈದ್ಯಕಿಯವಾಗಿ ಇರುವ ಅರ್ಥವೇ ಬೇರೆ, ನಮ್ಮಂಥ 
ಸಾಮಾನ್ಯರ ಮನಸ್ಸಿನಲ್ಲಿ ಮೂಡುವ ಅರ್ಥವೇ ಬೇರೆ. ನಮ್ಮ ಮನಸ್ಸಿನ ಹಾಗು “ ಬ್ರಹ್ಮನ್ “ ನ ಸ್ಥಾನ ಹೃದಯವೆಂದು ಪುರಾಣಗಳು ಹೇಳುತ್ತವೆ. ಅದರ ಸತ್ಯಾಸತ್ಯತೆ ಬಗ್ಗೆ ವಾದ-ವಿವಾದ ಈಗ ಬೇಡ. ಪ್ರೇಮಿಗೆ ಹೃದಯ ಪ್ರೀತಿಯ ಸಂಕೇತ. ಹೆತ್ತವರಿಗೆ ಹೃದಯ ಮಮತೆಯ ಸಂಕೇತ. ಭಕ್ತನಿಗೆ ಅದು ಭಕ್ತಿ ಭಾವದ ಸಂಕೇತ, ಕಲಾರಾಧಕನಿಗೆ ಕಲೆಯ ಸಂಕೇತ. ಆಧ್ಯಾತ್ಮದಲ್ಲಿ ಹೃದಯ ನಿರಂತರ ಸತ್ಯದ ಸಂಕೇತ. ಹೀಗೆ ನಾಮ ಒಂದಾದರೂ ಇದರ ಭಾವ ಹಲವು. ಗಾತ್ರದಲ್ಲಿ ಪುಟ್ಟದಾದರೂ ಕಾರ್ಯ ಹಿರಿದು.ಮಾನವ ಭಾವನಾತ್ಮಕವಾದ ಜೀವಿ. ನಮ್ಮ ಭಾವನೆಗಳೆಲ್ಲ ಕೂಡಿಡುವುದು ನಮ್ಮ ಹೃದಯದಲ್ಲಿ. ಹೃದಯದಾಳದಿಂದ ಬಂದ ಮಾತೆಂದರೆ ಸತ್ಯವಾದ ವಚನ ಎಂದು ಅರ್ಥ.

ಹೃದಯ ತಾಯಿಯ ಗರ್ಭದಲ್ಲಿ ಬಡಿಯಲು ಆರಂಭಿಸಿ ಬದುಕಿನಾದ್ಯಂತ ನಿರಂತರವಾಗಿ ದುಡಿಯುತ್ತದೆ. ಒಂದೇ ಒಂದು ಕ್ಷಣ ಅದು ಬಡಿತ ನಿಲ್ಲಿಸಿದರೂ ಎಲ್ಲವೂ ಸ್ತಬ್ಧವಾಗುತ್ತದೆ. ಮೆದುಳು ನಿಷ್ಕ್ರಿಯವದರೂ ಹೃದಯ ಮಾತ್ರ ತನ್ನ ಕೆಲಸವನ್ನು ಶ್ರದ್ದೆಯಿಂದ ಮಾಡುತ್ತಾ ಸಾಗುತ್ತದೆ. ಅದು ನಿಲ್ಲುವುದು ಒಂದೇ ಬಾರಿ. ಅದು ನಿಂತಾಗ ನಮ್ಮ ಭೌತಿಕ ಶರೀರ ತನ್ನ ಅಸ್ಥಿತ್ವವನ್ನು ಶಾಶ್ವತವಾಗಿ ಕಳೆದುಕೊಳ್ಳುತ್ತದೆ, ಅದು ಒಂದು ಅದ್ಭುತವಾದ ಯಂತ್ರ. ಜಾತಿ-ಮತ, ಮೇಲು-ಕೀಳು, ಹಿರಿಯ-ಕಿರಿಯ, ಬಡವ ಬಲ್ಲಿದನೆಂದು ತಾರತಮ್ಯವನ್ನು ಮಾಡದೇ ತನ್ನ ಕೆಲಸವನ್ನು ತನ್ನ ಪಾಡಿಗೆ ಮಾಡುತ್ತಾ ಸಾಗುತ್ತದೆ. ಅದರದ್ದು ಒಂದೇ ಗುರಿ- ತನ್ನ ಆಶ್ರಯದಾತನ ಒಳಿತಿಗಾಗಿ ಶ್ರದ್ದೆಯಿಂದ ಪಕ್ಷಪಾತವಿಲ್ಲದೆ ದುಡಿಯುತ್ತಾ ಸಾಗಿದೆ. ಅದಕ್ಕೆ ತನ್ನದೇ ಮನಸ್ಸಿದೆ. ನಮ್ಮ ಮೆದುಳು ನಮ್ಮ ಭೌತಿಕ ದೇಹದ ದಳಪತಿ. ಅದರ ಆಜ್ಞೆಯಿಲ್ಲದೆ ದೇಹದ ಯಾವ ಅಂಗಾಂಗವೂ ಕೆಲಸ ಮಾಡದು. ಆದರೆ ಹೃದಯ ಇದಕ್ಕೊಂದು ಅಪವಾದ. ಇದು ತಾಯಿಯಂತೆ ದೇಹದ ಪ್ರತಿಯೊಂದು ಅಂಗಾಂಗವನ್ನು ನಿರಂತರ ಪೋಷಿಸುತ್ತದೆ. ಮೆದುಳು ಕೂಡ ಇದರ ಕಾರ್ಯತತ್ಪರತೆಗೆ ತಲೆ ಬಾಗುತ್ತದೆ. ಆದರೆ ಇದರ ರಚನೆ ಏಕೆ ಹೀಗೆ? ಇದರಲ್ಲಿ ಇರುವ ನಾಲ್ಕು ಕೋಣೆಗಳ ಸಂಕೇತ ಕೇವಲ ವೈಜ್ಞಾನಿಕವಾದ ವಿವರಣೆಗೆ ಸೀಮಿತವೇ ಅಥವಾ ಅದಕ್ಕೂ ಮೀರಿ ಇದೆಯೇ? ಹೀಗೊಂದು ಪ್ರಶ್ನೆ ನನ್ನನ್ನು ಕಾಡಿತ್ತು.

ನಮ್ಮಲ್ಲಿ  ಉದ್ಭವವಾಗುವ ಭಾವನೆಗಳಲ್ಲಿ ಹಲವು ವಿಧ. ಪ್ರೇಮ ಕಾಮ, ಕ್ರೋಧ, ಮತ್ಸರ, ಮದ, ಮೋಹ, ಲೋಭ, ಭಕ್ತಿ ಹೀಗೆ ಹಲವಾರು. ಇವು ಯಾವುವು ನಮಗೆ ಕಣ್ಣಿಗೆ ಕಾಣಿಸಲಾರವು . ಆದರೆ ಇದರ ಅನುಭೂತಿ ಎಲ್ಲರಿಗೂ ಆಗುತ್ತದೆ. ಇವಗಳನ್ನು ಸಾತ್ವಿಕ, ರಾಜಸಿಕ ಹಾಗೂ ತಾಮಸಿಕ ಭಾವನೆಗಳೆಂದು ವಿಂಗಡಿಸಲಾಗಿದೆ. ನಮ್ಮೆಲ್ಲರಲ್ಲೂ ಈ ಭಾವನೆಗಳು ಪ್ರತಿ ಕ್ಷಣವೂ ಉದ್ಭವವಾಗಿ, ನಂತರ ಸಾಯುತ್ತಿರುತ್ತದೆ. ಈ ಭಾವನೆಗಳು ನಮ್ಮ ಜೀವನದ ಕಣ ಕಣಗಳ ಮೇಲೆ ಪರಿಣಾಮ ಬೀರುವುದೆಂದು ಅನೇಕ  ಪ್ರಯೋಗಗಳಿಂದ ಸಿದ್ಧವಾಗಿದೆ. ಅದೇ ರೀತಿ ಯೋಗ ಹಾಗು ಧ್ಯಾನ ನಮ್ಮಲ್ಲಿ ಉದ್ಭವವಾಗುವ ಅನೇಕ ರೋಗಗಳನ್ನು ನಿಯಂತ್ರಣದಲ್ಲಿಡಲು ಸಹಕಾರಿಯಗುತ್ತದೆಯೆಂದು ಸಿದ್ಧವಾಗಿದೆ. ಈ ಕ್ರಿಯೆಗಳು ನಮ್ಮ ಸಾತ್ವಿಕ ಆಲೋಚನೆಗಳಿಗೆ ಉತ್ತೇಜನ ನೀಡಿ, ತಾಮಸಿಕ ಗುಣಗಳನ್ನು ಕಡಿಮೆ ಮಾಡಿ ಈ ಕ್ಷಣದಲ್ಲಿ ಬದುಕಲು ಸಹಾಯ ಮಾಡುತ್ತವೆ. ಆದರೆ ಅದರ ವೈಜ್ಞಾನಿಕ ತಳಹದಿ ಇನ್ನೂ ಪೂರ್ಣವಾಗಿ ಅರ್ಥವಾಗಿಲ್ಲ. ಸಾತ್ವಿಕ ಗುಣಗಳಿಗೆ ಒಂದು ಕೋಣೆ, ರಜೋ ತಾಮಸಿಕ ಗುಣಗಳಿಗೆ ಇನ್ನೊಂದು ಕೋಣೆ, ಜೀವಾತ್ಮಕ್ಕೆ ಒಂದು, ಪರಮಾತ್ಮನಿಗೆ ಇನ್ನೊಂದು ಕೋಣೆ ಹೀಗೆ ಹೃದಯದ ರಚನೆ ಇರಬಹುದೇ? ಹಾಗಾದರೆ ಪುರಾಣಗಳಲ್ಲಿ ಹೇಳಿದ ಮಾತುಗಳಲ್ಲಿ ಸತ್ಯಾಂಶ ಅಡಗಿದೆಯೇ? ಅದರ ಅರಿವು ಇನ್ನು ನಮಗೆ ಇಲ್ಲವೇ? ಗೊತ್ತಿಲ್ಲ .
ಆದರೆ ನಾವು ನಮ್ಮೊಳಗೆ ಉದ್ಭವವಾಗುವ ಭಾವನೆಗಳನ್ನು ಹತೋಟಿಯಲ್ಲಿ ಇಡಬೇಕೆಂಬುದು ಮಾತ್ರ ನಿತ್ಯ ಸತ್ಯ. ಕೋಪ, ಹಗೆ, ಪ್ರತಿಕಾರ, ಸ್ವಜನ ಪಕ್ಷಪಾತದ ಭಾವನೆಗಳನ್ನು ತೊರೆದು ನಮಗೆ ಭಗವಂತನು ನೀಡಿದ ಜೀವನವೆಂಬ ಅದ್ಭುತವಾದ ಆಶೀರ್ವಾದಡೆಗೆ ಗಮನ ನೀಡಿದರೆ ಈ ಲೋಕವು ಬದುಕಲು ಅತಿ ಸುಂದರವಾದ ತಾಣವಾಗಿ ಬದಲಾಗಬಹುದು. ಹುಟ್ಟು ಸಾವು ಇವೆರಡು ಸಧ್ಯಕ್ಕೆ ಖಚಿತ. ಸಾವನ್ನು ಗೆಲ್ಲಲು ನಿರಂತರ ಪ್ರಯತ್ನಗಳು ಸಾಗುತ್ತಲಿವೆ. ಅಲ್ಲಿಯವರೆಗೆ “ ಅಂತ್ಯವನ್ನು ಮನದಲ್ಲಿಟ್ಟುಕೊಂಡು ನಮ್ಮ ಕಾರ್ಯಗಳನ್ನು ಮಾಡಬೇಕು”. 

Maari de Andrade, ಎಂಬವರು ಬರೆದಿರುವ ಅದ್ಭುತವಾದ ಕವನದ ಬಗ್ಗೆ ನನ್ನ ಗೆಳೆಯರೊಬ್ಬರು ಗಮನ ಸೆಳೆದರು . ಇದು ಸಾಮಾಜಿಕ ಜಾಲತಾಣಗಳಲ್ಲಿ ಬಹು ಚರ್ಚಿತವಾದ ಕವನವಾಗಿದೆ. ಅದನ್ನು ನನ್ನ ಗೆಳೆಯರೊಬ್ಬರು ಕಳುಹಿಸಿದಂತೆ ಶೇರ್ ಮಾಡುತ್ತಿದ್ದೇನೆ.

Beautiful poem by Mario de Andrade (San Paolo 1893-1945) Poet, novelist, essayist and musicologist. One of the founders of Brazilian modernism.

________________________________________________________
I counted my years and realized that I have less time to live by, than I have lived so far.

I feel like a child who won a pack of candies: at first, he ate them with pleasure but when he realized that there was little left, he began to taste them intensely.

I have no time for endless meetings where the statutes, rules, procedures and internal regulations are discussed, knowing that nothing will be done.

I no longer have the patience to stand absurd people who, despite their chronological age, have not grown up.

My time is too short: I want the essence; my spirit is in a hurry. I do not have much candy in the package anymore.

I want to live next to humans, very realistic people who know how to laugh at their mistakes and who are not inflated by their own triumphs and who take responsibility for their actions. In this way, human dignity is defended and we live in truth and honesty.

It is the essentials that make life useful.

I want to surround myself with people who know how to touch the hearts of those whom hard strokes of life have learned to grow with sweet touches of the soul.

Yes, I'm in a hurry. I'm in a hurry to live with the intensity that only maturity can give.

I do not intend to waste any of the remaining desserts. I am sure they will be exquisite, much more than those eaten so far.

My goal is to reach the end satisfied and at peace with my loved ones and my conscience.

We have two lives and the second begins when you realize you only have one.

_______________________________________________________
Source: PoemHunter.com


ಇದು ಜೀವನದ ಬಗ್ಗೆ ಬರೆದ ಒಂದು ಅತ್ಯಂತ ಮಾರ್ಮಿಕವಾದ ಕವನ. ಇನ್ನೊಬ್ಬ ಸಹಪಾಟಿ ,ಸಹೋದ್ಯೋಗಿ, ಸಹಜೀವಿಗಳಲ್ಲಿ  ಉಂಟಾಗುವ ತಾಮಸಿಕ ಭಾವನೆಗಳಾದ  ಈರ್ಷ್ಯೆ, ಕೋಪ, ಸೇಡು ಇವು ನೀರಿನ ಮೇಲಿನ ಗುಳ್ಳೆಯಂತೆ. ಸಣ್ಣ ಪುಟ್ಟ ವಿಷಯಗಳಿಗೆ ಆತ್ಮಹತ್ಯೆ ಮಾಡುವವರು, ಜೀವನದಲ್ಲಿ ಸವಾಳುಗಳೆದುರಾದಾಗ ಓಡಿಹೋಗುವ ಮನೋಭಾವ ಉಳ್ಳವರು, ತಮ್ಮ ಜೀವನವನ್ನು ಇತರರ ಬಗ್ಗೆ ಅನಗತ್ಯವಾದ ವಿಷಯಗಳನ್ನು ಮಾತನಾಡುತ್ತಾ ಕಳೆಯುವವರು, ತಮ್ಮ ಕೆಲಸ ಪೂರ್ತಿಗೊಳಿಸಲು ಇತರರನ್ನು ಧ್ವಂಸ ಮಾಡುವ ಸ್ವಾರ್ಥಿಗಳು, ಹಣಕ್ಕೋಸ್ಕರ ಹೆಣವನ್ನು ಬಿಡದ ಜಿಪುಣರು ಆತ್ಮಾವಲೋಕನ ಮಾಡಿಕೊಳ್ಳಲು ಈ ಕವನವನ್ನು ಓದಲೇಬೇಕು. ಕೊನೆಯ ಸಾಲು ಅತ್ಯಂತ ಅರ್ಥಗರ್ಭಿತವಾದದ್ದು. ನಮಗೆ ಈ ಭೂಮಿಯಲ್ಲಿ ಎರಡು ಜೀವನಗಳಿವೆ . ಎರಡನೆಯ ಬದುಕು ಆರಂಭವಾಗುವುದೇ ನಮಗೆ ನಮ್ಮ ಬದುಕಿನ ಗುರಿ ಅರಿವಾದಾಗ ಎಂದು ಕವಿ ಅತ್ಯಂತ ಮನೋಜ್ಞವಾಗಿ ಬರೆದಿದ್ದಾರೆ.


ಹೃದಯಕ್ಕೆ ಏಕೆ ನಾಲ್ಕು ಕೋಣೆಗಳಿವೆ ಎಂದು ಅರಿವಾಗುವುದು ಕೊನೆಯ ಸತ್ಯ ಅರಿವಾದಾಗ

Comments

Popular posts from this blog

ನಿಮಗೇನಾದರೂ ಅರ್ಥವಾಯಿತೇ???

ಜೀವನ ಇಂದು ಮಗ್ಗುಲು ಬದಲಿಸಿತ್ತು

ಕೆಲಸದ ಸ್ಥಳದಲ್ಲಿನ ರಾಜಕೀಯ- Office politics